ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷದ ಹಿಂದೆ | ಚುನಾಯಿತ ಸರ್ಕಾರಗಳ ಪತನ ಚಳವಳಿಗಳ ಗುರಿ: ಇಂದಿರಾ ಖಂಡನೆ

ಗುರುವಾರ, ಸೆಪ್ಟೆಂಬರ್‌ 12, 1974
Published : 11 ಸೆಪ್ಟೆಂಬರ್ 2024, 21:55 IST
Last Updated : 11 ಸೆಪ್ಟೆಂಬರ್ 2024, 21:55 IST
ಫಾಲೋ ಮಾಡಿ
Comments

ಚುನಾಯಿತ ಸರ್ಕಾರಗಳ ಪತನ ಚಳವಳಿಗಳ ಗುರಿ: ಇಂದಿರಾ ಖಂಡನೆ

ನವದೆಹಲಿ, ಸೆ. 11– ಆರ್ಥಿಕ ಸಂಕಷ್ಟಗಳ ಕಾರಣದಿಂದ ಜನರಲ್ಲಿರುವ ಅಸಮಾಧಾನವನ್ನು ಕೆರಳಿಸಿ ಭಾರತಕ್ಕೆ ವಿರೋಧಿಯಾಗಿರುವ ಶಕ್ತಿಗಳು ಚಿಲಿಯಲ್ಲಿನಂತೆ ಇಲ್ಲಿ ಸಹ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿವೆಯೆಂದು ಪ್ರಧಾನಿ ಇಂದಿರಾ ಗಾಂಧಿ ಎಚ್ಚರಿಸಿದ್ದಾರೆ.

ಸಂಸದೀಯ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಬಿಹಾರ ಮತ್ತಿತರ ಕಡೆ ನಡೆಯುತ್ತಿರುವ ಚಳವಳಿಗಳಲ್ಲಿ ಭಾಗವಹಿಸುತ್ತಿರುವವರಲ್ಲಿ ಆರ್‌.ಎಸ್‌.ಎಸ್‌. ಸದಸ್ಯರು, ನಕ್ಸಲೀಯರು ಮತ್ತು ಆನಂದಮಾರ್ಗಿಗಳು ಇದ್ದಾರೆಂದರು.

***

ಎಷ್ಟು ಗರ್ವ?

ಬೆಂಗಳೂರು, ಆ. 11– ಈ ಅಧಿಕಾರಿಗೆ ಎಷ್ಟು ಗರ್ವ?

ಬುಧವಾರ ವಿಧಾನ ಪರಿಷತ್ತಿನಲ್ಲಿ ಈ ಕುಪಿತ ಮಾತು ಹಾಗೂ ಅದೇ ಧಾಟಿಯಲ್ಲಿ ಟೀಕೆ ಬಂದದ್ದು ರಾಜ್ಯದ ಎಕ್ಸೈಜ್ ಕಮಿಷನರ್ ಬಗ್ಗೆ. ಈ ಅಧಿಕಾರಿಯ ಬಗ್ಗೆ ಎಲ್ಲ ಪಕ್ಷಗಳ ಸದಸ್ಯರಿಂದ ಖಂಡನೆ.

ಪುದುಚೇರಿಯಿಂದ ಮಾಹೆಗೆ ತೆರಳುತ್ತಿದ್ದ ಮದ್ಯವಿದ್ದ ಲಾರಿಯೊಂದನ್ನು ಹಿಡಿದ ಪ್ರಕರಣ ಇದು. ಅಬ್ಕಾರಿ ಕಮಿಷನರ್ ಅವರ ವರ್ತನೆ ಕುರಿತು ರಾಜ್ಯದ ಹೈಕೋರ್ಟ್ ಸಹ
ಟೀಕಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT