ಮಂಗಳವಾರ, ಏಪ್ರಿಲ್ 20, 2021
31 °C

50 ವರ್ಷಗಳ ಹಿಂದೆ: ಶನಿವಾರ, 27–2–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿಯಲ್ಲಿ ಗುಪ್ತ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆ ಪತ್ತೆ

ಬೆಂಗಳೂರು, ಫೆ. 26– ರಾಜ್ಯದ ಸಿಐಡಿ ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ಅಕ್ರಮ ದೇಶಿ ಮತ್ತು ವಿದೇಶಿ ಶಸ್ತ್ರಾಸ್ತ್ರ ಮದ್ದು–ಗುಂಡುಗಳನ್ನು ವಶಪಡಿಸಿಕೊಂಡು, ಗುಪ್ತವಾಗಿ ಶಸ್ತ್ರಾಸ್ತ್ರ ಉತ್ಪಾದಿಸುತ್ತಿದ್ದ ಕಾರ್ಖಾನೆಯೊಂದನ್ನು ಬಳ್ಳಾರಿಯಲ್ಲಿ ಪತ್ತೆ ಮಾಡಿದ್ದಾರೆ.

ಲೈಸೆನ್ಸ್ ಇಲ್ಲದೇ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆಂಬ ಆಪಾದನೆ ಮೇಲೆ 37 ಮಂದಿಯನ್ನು ಬಂಧಿಸಲಾಗಿದೆ.

ಮತದಾನದ ಚೀಟಿ ಕನ್ನಡದಲ್ಲಿ

ನವದೆಹಲಿ, ಫೆ. 26– ಮೈಸೂರು ರಾಜ್ಯದ ಬೆಳಗಾವಿ ಕ್ಷೇತ್ರದಲ್ಲಿನ ಮತದಾನದ
ಚೀಟಿಗಳು ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ರುವುವು.

ಕೇರಳ ರಾಜ್ಯದ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಕನ್ನಡ ಹಾಗೂ ಮಲಯಾಳಿ
ಭಾಷೆಯಲ್ಲಿರುವುವು.

ಮೈಸೂರು ರಾಜ್ಯದ ಕೋಲಾರ ಕ್ಷೇತ್ರದಲ್ಲಿನ ಮತದಾನದ ಚೀಟಿಗಳು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತ
ವಾಗಿರುವುವು.

ಬೀದರ್ ಮತ್ತು ಚಿಕ್ಕೋಡಿ ಕ್ಷೇತ್ರಗಳ ಮತದಾನದ ಚೀಟಿಗಳು ಕನ್ನಡ ಹಾಗೂ ಮರಾಠಿಯಲ್ಲಿದ್ದರೆ ಉಳಿದ ಕ್ಷೇತ್ರಗಳ ಮತದಾನದ ಚೀಟಿಗಳು ಕನ್ನಡದಲ್ಲಿ ಮಾತ್ರ ಇರುವುವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು