ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಸೋಮವಾರ 29.3.1971

Last Updated 28 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಹಂಗಾಮಿ ಬಾಂಗ್ಲಾದೇಶ ಸರ್ಕಾರ ರಚನೆ; ಢಾಕಾ ಕಡೆಗೆ ದಂಡಯಾತ್ರೆ

ಕಲ್ಕತ್ತ, ಮಾರ್ಚ್ 28– ಹಂಗಾಮಿ ಬಾಂಗ್ಲಾ ದೇಶ್‌ ಸರ್ಕಾರವನ್ನು ರಚಿಸಲಾಗಿದೆಯೆಂದು ಸ್ವತಂತ್ರ ಬಾಂಗ್ಲಾ ರೇಡಿಯೊ ಇಂದು ಪ್ರಕಟಿಸಿ ತನ್ನ ವಿಮೋಚನಾ ಸೇನೆಯು ಚಿತ್ತಗಾಂಗಿನಿಂದ ಢಾಕಾಗೆ ದಂಡಯಾತ್ರೆ ಹೊರಟಿದೆಯೆಂದು ತಿಳಿಸಿತು.

ಹೊಸ ಸರ್ಕಾರಕ್ಕೆ ಕೂಡಲೇ ಮಾನ್ಯತೆ ನೀಡಬೇಕೆಂದು ವಿಶ್ವದ ಎಲ್ಲ ಸ್ವತಂತ್ರ ರಾಷ್ಟ್ರಗಳಿಗೆ ಅದರಲ್ಲೂ ನೆರೆರಾಷ್ಟ್ರಗಳಿಗೆ ರೇಡಿಯೊ ಮನವಿ ಮಾಡಿಕೊಂಡಿದೆ.

ಚಿತ್ತಗಾಂಗ್‌ನಲ್ಲಿರುವ ತಮ್ಮ ಕ್ರಾಂತಿಕಾರಿ ಪ್ರಧಾನ ನೆಲೆಯಿಂದ ವಿಮೋಚನೆ ಸಮರವನ್ನು ನಿರ್ದೇಶಿಸು ತ್ತಿರುವ ‘ಬಾಂಗ್ಲಾ ಬಂಧು’ ಶೇಖ್ ಮುಜೀಬುರ್ ರಹಮಾನ್‌ರವರು ಸರ್ಕಾರಕ್ಕೆ ಮಾರ್ಗದರ್ಶನ ನೀಡುವರೆಂದೂ ರೇಡಿಯೊ ಹೇಳಿದೆ.

‘ಮನ ಒಲಿಸುವ ಶಾಸ್ತ್ರ’ ಸಾಹಿತ್ಯ ಕಿರುಕುಳ ಆಗಬಾರದು: ಬೇಂದ್ರೆ

ಬೆಂಗಳೂರು, ಮಾರ್ಚ್ 28– ಸಾಹಿತ್ಯವನ್ನು ‘ಮನ ಒಲಿಸುವ ಶಾಸ್ತ್ರ’ ಎಂದು ಇಂದು ಇಲ್ಲಿ ಕರೆದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ‘ಸಾಹಿತ್ಯವು ಕಿರುಕುಳ ಆಗಬಾರದು’ ಎಂದರು.

ಸಹಕಾರ, ಸಹಭಾವವಿಲ್ಲದವನಿಗೆ ಸಾಹಿತ್ಯವಿಲ್ಲವೆಂದ ಅವರು, ‘ಸಾಹಿತ್ಯದಲ್ಲಿ ಬಹಿಷ್ಕಾರದ ಮಾತಿಲ್ಲ. ಸಾಹಿತ್ಯದಲ್ಲಿ ಸ್ಪರ್ಶಜನ್ಯ ರೋಗ ಸಲ್ಲದು’ ಎಂದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ‘ಹೊಸಗನ್ನಡ ಕಾವ್ಯದ ಎರಡು ಮಾರ್ಗಗಳು’ ಕುರಿತ ಮೂರು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಬೇಂದ್ರೆಯವರು, ‘ಸಾಂಕೇತಿಕ ಸಾಹಿತ್ಯದಲ್ಲಿ ಸಹನೆ ಅಭ್ಯಾಸ ಮಾಡದಿದ್ದರೆ ಜೀವನದಲ್ಲಿ ಸಹನೆ ಹೇಗೆ ಬರುತ್ತೆ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT