ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ, 14–09–1972

Last Updated 13 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ನೇಪಾಳ ಮಿಲಿಟರಿ ವಿಮಾನ ಅಪಘಾತ: 31 ಜನರ ಸಾವು

ಕಠಮಂಡು, ಸೆ.13– ಕಠಮಂಡುವಿನಿಂದ 30 ಕಿ.ಮೀ ಪೂರ್ವಕ್ಕೆ ಧುಲಿಖೇರಿ ಎಂಬಲ್ಲಿ ಇಂದು ಮಧ್ಯಾಹ್ನ ರಾಯಲ್‌ ನೇಪಾಲೀಸ್ ಸೇನಾ ವಿಮಾನವು ಅಪಘಾತಕ್ಕೀಡಾಗಿ ಸೇನೆಯ ಎಲ್ಲಾ 31 ಮಂದಿ ಪ್ಯಾರಾಚೂಟ್‌ ಶಿಕ್ಷಣಾರ್ಥಿಗಳು ಮರಣ ಹೊಂದಿದರು.

ಈ ಪೈಕಿ ನಾಲ್ವರು ಚಾಲಕ ವರ್ಗಕ್ಕೆ ಸೇರಿದವರು. ನೇಪಾಳದ ಚರಿತ್ರೆಯಲ್ಲೇ ಇದು ಅತ್ಯಂತ ದಾರುಣ ವಿಮಾನದುರಂತ ಎಂದು ಬಣ್ಣಿಸಲಾಗಿದೆ.

ನೇಪಾಳದ ಪೌರತ್ವ ಪಡೆದ
ಆಗ್ಲೋ–ಇಂಡಿಯನ್‌ ಮ್ಯಾಕ್‌ಕಿಂಗ್‌ ಅವರೂ ಸೇರಿ 29 ಜನರು ಸ್ಥಳದಲ್ಲೇ ಸತ್ತರು. ಇನ್ನಿಬ್ಬರು ಮಿಲಿಟರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪಂಡಖಾಲ್‌ ಪ್ರದೇಶದಲ್ಲಿ ಪ್ರಯೋಗಾರ್ಥ ಹಾರಾಟ ನಡೆಸಿದ ನಂತರ ನೆಲೆಗೆ ವಾಪಸಾಗುತ್ತಿದ್ದಾಗ ಧುಲಿಖೇತ್‌ ಬಳಿ ವಿಮಾನ ಗುಡ್ಡಕ್ಕೆ ಬಡಿಯಿತೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಪ್ರಸ್ತುತ ನೀರಾವರಿ–ವಿದ್ಯುತ್‌ ಯೋಜನೆಗಳ ತ್ವರಿತ ಅಂತ್ಯಕ್ಕೆ ರಾಜ್ಯಗಳಿಗೆ ಸಚಿವ ಧರ್‌ ಸಲಹೆ

ನವದೆಹಲಿ, ಸೆ.13– ಈಗಾಗಲೇ ಆರಂಭಿಸಿರುವ ನೀರಾವರಿ ಮತ್ತು ವಿದ್ಯುಚ್ಛಕ್ತಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳುವಂತೆ ಯೋಜನೆ ಸಚಿವ ಡಿ.ಪಿ.ಧರ್‌ ಅವರು ಇಂದು ಇಲ್ಲಿ ರಾಜ್ಯಗಳಿಗೆ ಸಲಹೆ ಮಾಡಿದರು.

ಇತ್ತೀಚೆಗೆ ಆರಂಭಿಸಿದ ಅಭಾವ ಪರಿಹಾರ ಕಾಮಗಾರಿ ಮತ್ತು ತರ್ತು ಉತ್ಪಾದನೆಯನ್ನು ದೀರ್ಘಾವಧಿ ಅಭಿವೃದ್ಧಿ ಕಾರ್ಯಕ್ರಮ
ಗಳನ್ನಾಗಿ ಪರಿವರ್ತಿಸಬೇಕೆಂದು ಅವರು ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳಿಗೆ ತಿಳಿಸಿದರೆಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT