ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಈ ದಿನ: ಅರಸು ಕೈಲಿ ಬಡವರ ರೊಟ್ಟಿ

Published 19 ಅಕ್ಟೋಬರ್ 2023, 19:16 IST
Last Updated 19 ಅಕ್ಟೋಬರ್ 2023, 19:16 IST
ಅಕ್ಷರ ಗಾತ್ರ

ಬಡವರ ಆಸ್ತಿ, ಬಡವರ ಸರ್ಕಾರ, ಅರಸು ಕೈಲಿ ಬಡವರ ರೊಟ್ಟಿ 

ಬೆಂಗಳೂರು, ಆ. 19: ‘ಇದು ಬಡವರ ಆಸ್ತಿ. ಇದು ಬಡವರ ಸರ್ಕಾರ. ಇಂದು ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಶ್ರೀ ಅರಸು ಅವರು ಈ ಮಾತನ್ನು ಹೇಳಿ ಕುಳಿತಾಗ ಕೈಯಲ್ಲಿ ಜೋಳದ ರೊಟ್ಟಿ ಹಿಡಿದಿದ್ದರು. 

ನಿನ್ನೆ ವಿರೋಧ ಪಕ್ಷದ ನಾಯಕ ಶ್ರೀ ರಾಮಕೃಷ್ಣ ಹೆಗಡೆ ಅವರು ಕಸವಿದ್ದ ಜೋಳ, ಒಣಗಿದ್ದ ಜೋಳದ ತೆನೆಗಳನ್ನು ಸಭೆಯಲ್ಲಿ ತೋರಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದರು. ಜೋಳ ಕೆಟ್ಟಿದೆ ಎಂಬುದನ್ನು ಮುಖ್ಯಮಂತ್ರಿ ಒಪ್ಪಲಿಲ್ಲ. ರೊಟ್ಟಿ ಮಾಡಿ ಹೆಗಡೆ ಅವರನ್ನು ಕರೆಯುವುದಾಗಿ ಭರವಸೆ ನೀಡಿದ್ದರು. ಇಂದು  ಆ ಜೋಳದಿಂದ ರೊಟ್ಟಿ ಮಾಡಿಸಿ ಮುಖ್ಯಮಂತ್ರಿ ಸಭೆಗೆ ತಂದಿದ್ದರು. 

ಸರ್ಕಾರದಿಂದ ₹3 ಕೋಟಿ ಬೆಲೆಯಷ್ಟು ಬಿತ್ತನೆ ಬೀಜದ ಹಂಚಿಕೆ ನಾನಾ ಕಡೆಗಳಿಂದ ತರಿಸಿದ್ದು, ನೂರಕ್ಕೆ ನೂರರಷ್ಟು ಬಿತ್ತನೆ ಬೀಜ ಸರಿಯಾಗಿರಲು ಸಾಧ್ಯವಿಲ್ಲ. ಶೇಕಡಾ 5ರಿಂದ 15ರಷ್ಟು ಕೆಟ್ಟೆದ್ದಿರಬಹುದೆಂದು ಮುಖ್ಯಮಂತ್ರಿ ಒಪ್ಪಿಕೊಂಡರು. ಮಾರುಕಟ್ಟೆಯಲ್ಲಿ ಕೊಂಡ ಜೋಳದಲ್ಲಿ ಕಸವಿರಬಹುದು. ಆದರೆ ಜೋಳ ತಿನ್ನಲಿಕ್ಕೆ ಅರ್ಹವಾದುದಲ್ಲ ಅಂತ ನಿನ್ನೆ ಸದಸ್ಯರು ಹೇಳಿದುದದನ್ನು ಮಾತ್ರ ಒಪ್ಪಲಿಲ್ಲ. 

ಮೈಸೂರು ಸಾಬೂನು ಕಾರ್ಖಾನೆ ವಿಸ್ತರಣೆ ಇಟಲಿ ಜೊತೆ ಒಪ್ಪಂದ

ಬೆಂಗಳೂರು ಅ. 19: ಗಂಧದ ಸಾಬೂನು ತಯಾರಿಸುವ ಪ್ರಸಿದ್ದ ಮೈಸೂರು ಸರ್ಕಾರಿ ಸಾಬೂನು ಕಾರ್ಖಾನೆಯ 50 ವರ್ಷಗಳ ಇತಿಹಾಸದಲ್ಲಿ ಇಂದಿನಿಂದ ನೂತನ ಅಧ್ಯಾಯ ಅರಂಭ. 

1975ನೇ ಜನವರಿ 31ರಂದು ವರ್ಷಕ್ಕೆ 10 ಸಾವಿರ ಟನ್‌ನಷ್ಟು ಬಿಲ್ಲೆ ಹಾಗೂ ಪುಡಿ ರೂಪದ ಸಾಬೂನು ತಯಾರಿಸುವ ವಿಸ್ತರಣೆ ಯೋಜನೆಗೆ ಕೈಗಾರಿಕಾ ಸಚಿವ ಶ್ರೀ ಎಸ್‌. ಎಂ ಕೃಷ್ಣ ಅವರು ಸಹಿ ಹಾಕಿದರು. 

ಪಶ್ವಿಮ ಏಷ್ಯಾ ಶಾಂತಿಗಾಗಿ ಕೊಸಿಗಿನ್‌ ಸೂತ್ರ 

ಕೈರೋ, ಅ. 19-ಸೋವಿಯತ್ ಪ್ರಧಾನಿ ಕೊಸಿಗಿ ಅವರು ಈ ವಾರ ಇಲ್ಲಿ ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದತ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಪಶ್ಚಿಮಏಷ್ಯಾ ಶಾಂತಿ ಯೋಜನೆಯೊಂದನ್ನು ಸಾದತ್ ಅವರಿಗೆ ಸಲ್ಲಿಸಿದರೆಂದು ಇಲ್ಲಿಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಅವರಿಬ್ಬರ ಮಾತುಕತೆಯ ಬಗ್ಗೆ ನೀಡಿರುವ ಅಧಿಕೃತ ಪ್ರಕಟಣೆಯಲ್ಲಿ ಚರ್ಚಿಸಲ್ಪಟ್ಟ ವಿಷಯಗಳ ಪ್ರಸ್ತಾಪ ಇಲ್ಲವಾದರೂ, ರಷ್ಯಾ ಸೂಚಿಸಿರುವ ಯೋಜನೆಯಲ್ಲಿ “ಇಸ್ರೇಲಿಗಳು 1967ರ ಜೂನ್ ಐದರಂದು ಇದ್ದ ಸ್ಥಾನಗಳಿಗೆ ವಾಪಸಾಗಬೇಕು” ಎಂದು ಸಲಹೆ ಮಾಡಿದೆ ಎಂದು ಈ ಮೂಲ ಗಳು ತಿಳಿಸಿವೆ.

ಅಲ್ಲದೇ, ಇಸ್ರೇಲ್‌ ಗಡಿಭದ್ರತೆ ದೃಷ್ಟಿಯಿಂದ ಗಡಿಯಲ್ಲಿ, ಅಲ್ಪ ಸ್ವಲ್ಪ ಬದಲಾವಣೆಗಳನ್ನೂ ರಷ್ಯಾ ಸೂಚಿಸಿದೆಯೆಂದು ಡಿಪಿಎ ವರದಿ ಮಾಡಿದೆ. 

ವಿಜಯನಗರ ಉಕ್ಕು ಕಾರ್ಖಾನೆ: ಶೀಘ್ರವೇ ಕಂಪನಿ ರಿಜಿಸ್ಟರ್‌ 

ಬೆಂಗಳೂರು, ಅ. 19: ವಿಜಯನಗರ ಉಕ್ಕಿನ ಕಾರ್ಖಾನೆ ಆಗುತ್ತದೆ ಎಂಬ ವಿಶ್ವಾಸವನ್ನು ಕೈಗಾರಿಕಾ ಸಚಿವ ಶ್ರೀ ಎಸ್. ಎಂ. ಕೃಷ್ಣ ಅವರು ಇಂದು ವಿಧಾನ ಪರಿಷತ್ತಿನಲ್ಲಿ ವ್ಯಕ್ತಪಡಿಸಿದರು.

ಈ ಕಾರ್ಖಾನೆಯನ್ನು ಸ್ಥಾಪಿಸಲು 12 ರಿಂದ 15 ಸಾವಿರ ಎಕರೆ ಜಮೀನು ಬೇಕಾಗುವುದೆ೦ದೂ, ಈಗಾಗಲೇ 4500 ಎಕರ ಜಮೀನನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು 1500 ಎಕರ ಜಮೀನನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದೂ, ಜಮೀನು ವಶಪಡಿಸಿಕೊಳ್ಳಲು ಕೇಂದ್ರದ ಸರ್ಕಾರ ₹1 ಕೋಟಿಯನ್ನು ನೀಡಿದೆ ಎಂದೂ ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT