ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ವಿಧಾನಸೌಧಕ್ಕೆ ನಡೆದೇ ಬರಲು ಅರಸು ಉದ್ದೇಶ

Published 22 ನವೆಂಬರ್ 2023, 0:08 IST
Last Updated 22 ನವೆಂಬರ್ 2023, 0:08 IST
ಅಕ್ಷರ ಗಾತ್ರ

ವಿಧಾನಸೌಧಕ್ಕೆ ನಡೆದೇ ಬರಲು ಅರಸು ಉದ್ದೇಶ

ಬೆಂಗಳೂರು, ನ. 21– ಪೆಟ್ರೋಲ್‌ ಪೂರೈಕೆ ಕೊರತೆಯನ್ನು ಗಮನಿಸಿ, ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು, ತಮ್ಮ ಅಧಿಕೃತ ನಿವಾಸದಿಂದ ವಿಧಾನಸೌಧಕ್ಕೆ ನಡೆದು ಬಂದು, ನಡೆದು ಮರಳುವ ಪರಿಪಾಟ ಆರಂಭಿಸುವ ಉದ್ದೇಶ ಹೊಂದಿದ್ದಾರೆ.

ಕುಮಾರಪಾರ್ಕ್‌ನಲ್ಲಿರುವ ನಿವಾಸದಿಂದ ವಿಧಾನಸೌಧಕ್ಕೆ ಇರುವ ದೂರ ಸುಮಾರು ಒಂದು ಮೈಲಿ. ‘ಇನ್ನು ಮುಂದೆ ನಡೆದು ಕೊಂಡೇ ಆ ದೂರವನ್ನು ಕ್ರಮಿಸಿ ನಾನು ಕಚೇರಿಗೆ ಬರಬಹುದು’ ಎಂದು ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ಏರ್‌ಲೈನ್ಸ್‌ ಸಿಬ್ಬಂದಿ– ಆಡಳಿತದ ನಡುವೆ ಸಂಧಾನ ವಿಫಲ

ನವದೆಹಲಿ, ನ. 21– ವಿಮಾನ ಸಾರಿಗೆ ನೌಕರರ ಚಳವಳಿ ಅಂತ್ಯ ಕುರಿತು ಇಂಡಿಯನ್‌ ಏರ್‌ಲೈನ್ಸ್‌ ಆಡಳಿತ ವರ್ಗ ಮತ್ತು ಏರ್‌ ಕಾರ್ಪೊರೇಷನ್‌ ನೌಕರರ ಸಂಘದ ಪ್ರತಿನಿಧಿಗಳ ನಡುವೆ ಇಂದು ನಡೆದ ಸಂಧಾನ ಮಾತುಕತೆ ಮುರಿದುಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT