ಇಂದಿರಾ ಆಸ್ತಿ ನಾಲ್ಕು ಎಕರೆ ಭೂಮಿ ಮಾತ್ರ
ನವದೆಹಲಿ, ನ. 26– ದೆಹಲಿ ಸಮೀಪದಲ್ಲಿರುವ ನಾಲ್ಕು ಎಕರೆ ಜಮೀನನ್ನು ಬಿಟ್ಟರೆ ತಮಗೆ ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಬೇರೆಲ್ಲಿಯೂ ಯಾವ ಆಸ್ತಿಯೂ ಇಲ್ಲವೆಂದು ಪ್ರಧಾನಿ ಇಂದಿರಾ ಗಾಂಧಿ ಇಂದು ರಾಜ್ಯಸಭೆಗೆ ತಿಳಿಸಿದರು.

ಕೇಂದ್ರ ಸಚಿವರುಗಳ ಆಸ್ತಿ ಕುರಿತ ನಿರಂಜನ ವರ್ಮ ಮತ್ತು ರಾಜ್‌ನಾರಾಯಣ್‌ರ ಪ್ರಶ್ನೆಗೆ ಉತ್ತರವಿತ್ತ ಇಂದಿರಾ ಗಾಂಧಿ, ಕೇಂದ್ರ ಸಚಿವರು ಅವರ ಹಾಗೂ ಅವರ ಹತ್ತಿರದ ಬಂಧುಗಳ ಆಸ್ತಿ ವಿವರಗಳನ್ನು ತಮಗೆ ತಿಳಿಸುವುದಾಗಿಯೂ ಅದನ್ನು ರಹಸ್ಯ ವಿಷಯವಾಗಿ ಪರಿಗಣಿಸಲಾಗಿದೆಯೆಂದೂ ತಿಳಿಸಿದರು.

ಭಾರತದಿಂದ ಭೂಗರ್ಭ ಅಣು ಸ್ಫೋಟ ಸಂಭವ ಎಂದು ಪ್ರಧಾನಿ
ನವದೆಹಲಿ, ನ. 26– ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿಯನ್ನು ಬಳಸುವ ಸರ್ಕಾರದ ನೀತಿಯಲ್ಲಿ ‘ಭೂಗರ್ಭದಲ್ಲಿ ಅಣುಸಾಧನ ಸ್ಫೋಟವೂ ಸೇರಿದೆ’ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ರಾಜ್ಯಸಭೆಯಲ್ಲಿ ಹೇಳಿದರು.

ಭೂಗರ್ಭ ಅಣುಸಾಧನ ಸ್ಫೋಟಗಳ ಬಗೆಗೆ ಭಾರತವು ತನ್ನ ತಾಂತ್ರಿಕ ಜ್ಞಾನವನ್ನು ಅಭಿವೃದ್ಧಿಗೊಳಿಸಿಕೊಳ್ಳುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.