ಶುಕ್ರವಾರ, ಸೆಪ್ಟೆಂಬರ್ 24, 2021
23 °C

50 ವರ್ಷಗಳ ಹಿಂದೆ: 15–8–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಗ್ಲಾದೇಶ: ವಿಶ್ವದ ಮನಃಸಾಕ್ಷಿಯ ಸತ್ವಪರೀಕ್ಷೆ

ನವದೆಹಲಿ, ಆಗಸ್ಟ್‌14– ಬಾಂಗ್ಲಾದೇಶದ ಪರಿಸ್ಥಿತಿಯು ‘ಈ ರಾಷ್ಟ್ರ ಮತ್ತು ಖಂಡದ ಮಾತ್ರವಲ್ಲದೆ ವಿಶ್ವದ ಭವಿಷ್ಯದ ಮೇಲೆಯೇ ಪರಿಣಾಮ ಬೀರಬಲ್ಲ ಇಡೀ ಮಾನವ ಸಮುದಾಯದ ಮನಃಸಾಕ್ಷಿಯ ಸತ್ವ ಪರೀಕ್ಷೆ’ ವಿಷಯವೆಂದು ರಾಷ್ಟ್ರಪತಿ ವಿ.ವಿ.ಗಿರಿ ಅವರು ವರ್ಣಿಸಿದ್ದಾರೆ.

ಈ ಸಮಸ್ಯೆ ಕುರಿತು ವ್ಯವಹರಿಸುವಾಗ ‘ನಾವು ಸದ್ಯದ ಪ್ರೇರೇಪಣೆಗಳನ್ನು ದೂರದೃಷ್ಟಿಯೊಂದಿಗೆ ಮಿಳಿತಗೊಳಿಸಬೇಕು’ ಎಂದು ಹೇಳಿದರು.

24ನೇ ಸ್ವಾತಂತ್ರ್ಯೋತ್ಸವದ ಹಿಂದಿನ ದಿನವಾದ ಇಂದು ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಚ್ಚರಿಕೆ: ‘ಕಷ್ಟದ ಕಾಲ’ ಮುಂದಿದೆಯೆಂದು ಎಚ್ಚರಿಸಿದ ಗಿರಿ ಅವರು, ‘ನಯವಾದ ದಿನಗಳು ಕಳೆದು ಹೋದವು. ನಾವಿನ್ನು ವಿದೇಶೀ ನೆರವನ್ನು ಆಸರೆಯಾಗಿ ಹೊಂದಿರಲಾಗದು. ಕಷ್ಟಪಟ್ಟು ಕೆಲಸ ಮಾಡಿ ಸರಳ ಜೀವನ ನಡೆಸುವ ಸಂಕಲ್ಪ ಮಾಡಿ’ ಎಂದು ಜನತೆಗೆ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು