ಶನಿವಾರ 21/7/1973
ನವದೆಹಲಿ, ಜುಲೈ 20– ‘ಸಂಘಟಿತ ಪಟ್ಟಭದ್ರ ಹಿತಗಳು’ ಯೋಜನಾ ವ್ಯವಸ್ಥೆ ವಿರುದ್ಧ ದಾಳಿ ಮಾಡುತ್ತಿರುವಾಗ ರಾಷ್ಟ್ರದಲ್ಲಿ ಕಾರ್ಮಿಕ ಚಳವಳಿ ನಾಯಕರು ಯೋಜನೆ ಬಗ್ಗೆ ಕಾರ್ಯವಿಧಾನವೊಂದನ್ನು ಒಪ್ಪಿಕೊಳ್ಳಬೇಕೆಂದು ಯೋಜನಾ ಸಚಿವ ಡಿ.ಪಿ. ಧರ್ ಅವರು ಇಂದು ಕರೆಕೊಟ್ಟರು.
ಐದನೇ ಯೋಜನೆಯ ಕರಡು ಕುರಿತು ಚರ್ಚಿಸಲು ಕಾರ್ಮಿಕ ಸಂಘಗಳ ನಾಯಕರು ಸೇರಿದ್ದ ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ ಧರ್ ಅವರು ಯೋಜನೆಯ ತತ್ವ ಮತ್ತು ವ್ಯವಸ್ಥೆಗೆ ಸಂಘಟಿತ ಕಾರ್ಮಿಕ ವರ್ಗ ಬದ್ಧವಾಗಿದೆ ಎಂದರು.
ವಾಷಿಂಗ್ಟನ್, ಜುಲೈ 20– ವಾಟರ್‌ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಸಲಹೆಗಾರರ ಜೊತೆ ನಡೆಸಿದ ಸಮಾಲೋಚನೆಯ ಧ್ವನಿ ಮುದ್ರಿಕೆಗಳನ್ನು ಅಧ್ಯಕ್ಷ ನಿಕ್ಸನ್ ಅವರು ಸೆನೆಟ್ ಸಮಿತಿಗೆ ಒಪ್ಪಿಸುವುದಿಲ್ಲವೆಂದು ‘ದಿ ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ವಾಷಿಂಗ್ಟನ್ ಪೋಸ್ಟ್’ ಇಂದು ವರದಿ ಮಾಡಿದೆ.
ಧ್ವನಿ ಮುದ್ರಿಕೆಗಳನ್ನು ನೀಡಲು ನಿರಾಕರಿಸಿ ಅಧ್ಯಕ್ಷ ನಿಕ್ಸನ್ ಅವರು ವಾರಾಂತ್ಯದಲ್ಲಿ ಸೆನೆಟ್ ಸಮಿತಿಗೆ ಪತ್ರ ಬರೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.