ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ 04–09–1971

Last Updated 3 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಮತ್ತೊಬ್ಬ ಪಾಕ್ ನೌಕರನಿಂದ ನಿಷ್ಠೆ ಬದಲಾವಣೆ
ನವದೆಹಲಿ, ಸೆ. 3–
ಇಲ್ಲಿನ ಪಾಕಿಸ್ತಾನಿ ಹೈಕಮಿಷನ್ ನೌಕರವರ್ಗದ ಬಂಗಾಳಿ ಸದಸ್ಯ, ಎಲೆಕ್ಟ್ರಿಷಿಯನ್ ಅಮ್ಜದ್ ‌ಆಲೀ ಅವರು ಇಂದು ಪತ್ನಿ ಮತ್ತು ಮೂರು ತಿಂಗಳ ಪುತ್ರಿ ಸಮೇತ ಹೈಕಮಿಷನ್ ಕಚೇರಿ ಆವರಣದಿಂದ ಪರಾರಿಯಾದರಲ್ಲದೆ ಭಾರತದಲ್ಲಿ ಆಶ್ರಯ ಕೋರಿದರು.

ಬಾಂಗ್ಲಾ ದೇಶಕ್ಕೆ ತಮ್ಮ ನಿಷ್ಠೆ ಬದಲಾಯಿಸಿದ ಪಾಕ್ ಹೈಕಮಿಷನ್ ನೌಕರರ ಸಂಖ್ಯೆಯು ಇದರಿಂದ ಐದಕ್ಕೆ ಏರಿತು.

ಬಂಗಾಳಿ ನೌಕರರು ಕಚೇರಿ ಆವರಣ ಬಿಟ್ಟು ಹೊರಗಡೆ ಹೋಗುವುದಕ್ಕೆ ಇದುವರೆ ವಿಗೂ ಅವಕಾಶಗಳಿರಲಿಲ್ಲ. ಆದರೆ ಪತ್ನಿ–ಪುತ್ರಿ ಜತೆ ಫೋಟೊ ತೆಗೆಸಿಕೊಳ್ಳುವ ನೆಪ ಒಡ್ಡಿದರು ಅಮ್ಮದ್ ಆಲೀ. ಭದ್ರತಾ ಅಧಿಕಾರಿಗಳು ದಂಪತಿಯನ್ನು ಹಿಂಬಾಲಿಸಿದರು.

ಸವಾಲು ಎದುರಿಸಲು ಸತತ ಸಜ್ಜು: ವಿಮಾನ ಪಡೆಗೆ ಇಂದಿರಾ ಕರೆ
ನವದೆಹಲಿ, ಸೆ. 3–
ಆತಂರಿಕವಾದ ಕೆಲವು ಸಮಸ್ಯೆಗಳು ಮತ್ತು ವಿದೇಶಿ ಬೆದರಿಕೆಯೂ ಸೇರಿದಂತೆ ರಾಷ್ಟ್ರವು ಈಗ ತೀವ್ರ ರೀತಿಯ ಸವಾಲುಗಳನ್ನು ಎದುರಿಸುತ್ತಿರುವುದೆಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವಾಯುಪಡೆ ಕಮಾಂಡರುಗಳಿಗೆ ತಿಳಿಸಿದರು.

‘ಈ ಸವಾಲುಗಳು ಹೆಚ್ಚು ಎಚ್ಚರಿಕೆಯಿಂದಿರಬೇಕೆಂಬ ಮುನ್ಸೂಚನೆ ನೀಡಿವೆ’ ಎಂದು ಅವರು ದ್ವೈವಾರ್ಷಿಕ ಸಮ್ಮೇಳನದಲ್ಲಿ ಕಮಾಂಡರುಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT