ಗೋಪಾಲ್ ಜತೆ ಅರಣ್ಯಕ್ಕೆ ತೆರಳಿದ ಇನ್ನೂ ಮೂವರು

ಚೆನ್ನೈ, ಅ. 10 (ಪಿಟಿಐ)– ವರನಟ ಡಾ. ರಾಜ್ಕುಮಾರ್ ಅವರ ಬಿಡುಗಡೆಗಾಗಿ ನರಹಂತಕ ವೀರಪ್ಪನ್ ಜತೆಗೆ ಸಂಧಾನ ನಡೆಸಲು ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್.ಆರ್. ಗೋಪಾಲ್ ಅವರೊಂದಿಗೆ, ತಮಿಳು ರಾಷ್ಟ್ರೀಯವಾದಿ ಚಳವಳಿ ನಾಯಕ ಪಿ. ನೆಡುಮಾರನ್ ಮತ್ತು ಇನ್ನಿಬ್ಬರು ಇಂದು ಬೆಳಿಗ್ಗೆ ಅರಣ್ಯಕ್ಕೆ ತೆರಳಿದರು.

ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಮನವಿ ಮೇರೆಗೆ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದರು.

ಇದರಿಂದಾಗಿ ಡಾ. ರಾಜ್ ಬಿಡುಗಡೆಗೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಈವರೆಗೆ ಅನುಸರಿಸಿದ್ದ ಕಾರ್ಯತಂತ್ರವನ್ನು ಗಣನೀಯವಾಗಿ ಬದಲಿಸಿದಂತಾಗಿದೆ.

ಲಂಕಾ: ಮಾಜಿ ಪ್ರಧಾನಿ ಸಿರಿಮಾವೋ ನಿಧನ

ಕೊಲಂಬೊ, ಅ. 10 (ಪಿಟಿಐ)– ವಿಶ್ವದ ಪ್ರಥಮ ಚುನಾಯಿತ ಮಹಿಳಾ ಪ್ರಧಾನಿ ಎಂಬ ಖ್ಯಾತಿಯ ಶ್ರೀಲಂಕಾದ ಮಾಜಿ ಪ್ರಧಾನಿ ಸಿರಿಮಾವೋ ಬಂಡಾರ ನಾಯಿಕೆ (84) ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತರಾದರು. ಅವರು ಮೂರು ಬಾರಿ ಪ್ರಧಾನಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.