ಮದ್ದೂರು: ಪರಿಶಿಷ್ಟರಿಗೆ ಬಹಿಷ್ಕಾರ?

ಮಂಡ್ಯ, ಜುಲೈ 10– ಮದ್ದೂರು ತಾಲ್ಲೂಕು ಕೊಪ್ಪ ಹೋಬಳಿಯ ಅಬಕಲವಾಡಿ ಗ್ರಾಮದ ಕೆಲವು ಸವರ್ಣೀಯ ಮುಖಂಡರು ಪರಿಶಿಷ್ಟ ಜಾತಿಗೆ ಸೇರಿದ ತಮ್ಮ ಮೇಲೆ ಕಳೆದ ಏಪ್ರಿಲ್ 19ರಿಂದ ಸಾಮಾಜಿಕ ಬಹಿಷ್ಕಾರ ಹಾಕಿ ಮಾನಸಿಕ ದೌರ್ಜನ್ಯ ನಡೆಸುತ್ತಿರುವುದಾಗಿ ಸಿ. ಜಯರಾಮು, ಎ.ಸಿ. ಕುಮಾರ್, ಎಂ. ಕೃಷ್ಣ ಮತ್ತಿತರರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

5 ಕುಟುಂಬಗಳ ಜೀತ ಮುಕ್ತಿ

ಮೈಸೂರು, ಜುಲೈ 10– ತಾಲ್ಲೂಕಿನ ಈರಪ್ಪನಕೊಪ್ಪಲು ಗ್ರಾಮದ ಬಳಿಯ ಕಲ್ಲು ಕ್ವಾರಿ ಮೇಲೆ ಭಾನುವಾರ ಹಠಾತ್ ದಾಳಿ ನಡೆಸಿದ ಪೊಲೀಸರು, ಅಲ್ಲಿ ಜೀತಕ್ಕೆ ಕೆಲಸ ಮಾಡುತ್ತಿದ್ದ 5 ಕುಟುಂಬಗಳ ಜನರನ್ನು ಬಿಡುಗಡೆ ಮಾಡಿದ್ದಾರೆ. ಈ ಕಲ್ಲು ಗಣಿ ಮಹದೇವಸ್ವಾಮಿ ಎಂಬುವರಿಗೆ ಸೇರಿದ್ದು, ಅಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ಈ ಕುಟುಂಬದ ಜನರನ್ನು ಆತ ತೊಡಗಿಸಿದ್ದ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.