ಮೃಗಾಲಯ ಹುಲಿಗಳ ಹತ್ಯೆ ಸಂಚು: ಮೊಕದ್ದಮೆ ದಾಖಲು

ಮೈಸೂರು, ಫೆ. 27– ಪ್ರತ್ಯೇಕ ಬೋನುಗಳಲ್ಲಿದ್ದ ಎರಡು ಬಿಳಿ ಹುಲಿಗಳನ್ನು ಒಂದೇ ಬೋನಿಗೆ ಸೇರುವಂತೆ ಮಾಡಿ ಅವುಗಳ ಮಧ್ಯೆ ಘರ್ಷಣೆಗೆ ಎಡೆಮಾಡಿಕೊಟ್ಟು ಅವುಗಳನ್ನು ಸಾವಿನ ಅಂಚಿಗೆ ಒಯ್ಯುವ ಸಂಚೊಂದು ನಗರದ ಮೃಗಾಲಯದಲ್ಲಿ ಕಳೆದ ರಾತ್ರಿ ನಡೆದಿದೆ.

ಇಲ್ಲಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಶ್ರೀಚಾಮರಾಜೇಂದ್ರ ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕ ಎನ್. ರಾಜಶೇಖರ್ ಅವರು ದೂರು ದಾಖಲು ಮಾಡಿದ್ದು, ಈ ಘಟನೆ ಬಗ್ಗೆ ತನಖೆ ನಡೆಸಿ ದುಷ್ಕರ್ಮಿಗಳನ್ನು ಪತ್ತೆ ಮಾಡುವಂತೆ ಕೋರಿದ್ದಾರೆ.

ಕಳೆದ ರಾತ್ರಿ ದುಷ್ಕರ್ಮಿಗಳು ಎರಡು ಬಿಳಿ ಹುಲಿಗಳಿದ್ದ ಪ್ರತ್ಯೇಕ ಬೋನುಗಳ ಬಾಗಿಲಿಗೆ ಹಾಕಿದ್ದ ಕಬ್ಬಿಣದ ಕೊಂಡಿಗಳನ್ನು ಸರಳಿನಿಂದ ಮೀಟಿ ಬೋನುಗಳ ಬಾಗಿಲು ತೆರೆದು ಕೊಳ್ಳುವಂತೆ ಮಾಡುವ ಮೂಲಕ ಹುಲಿಗಳು ಒಂದೇ ಕಡೆ ಸೇರುವಂತೆ ಮಾಡಿದ್ದಾರೆ.

ಔಷಧ ಸಸ್ಯ ಅಭಿವೃದ್ಧಿ: ಯೋಜನಾ ಆಯೋಗ ಸಲಹೆ

ಬೆಂಗಳೂರು, ಫೆ. 27– ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ರಾಜ್ಯವನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಶೀಘ್ರ ಅಭಿವೃದ್ಧಿಪಡಿಸಲು ಯೋಜನಾ ಆಯೋಗ ಕೆಲವು ಸಲಹೆಗಳನ್ನು ಮಾಡಿದೆ.

ಈ ಸಲಹೆಗಳಲ್ಲಿ ಮುಖ್ಯವಾಗಿ ಅತ್ಯಮೂಲ್ಯ ಔಷಧ ಸಸ್ಯಗಳನ್ನು ಬೆಳೆಸುವುದು, ಜಂಟಿ ಕ್ಷೇತ್ರದಲ್ಲಿ ಅರಣ್ಯ ಅಭಿವೃದ್ಧಿ, ಚರ್ಮೋದ್ಯೋಗ, ಸಿದ್ಧಉಡುಪು ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ ಎಂದು ಹನ್ನೊಂದನೇ ಯೋಜನಾ ಆಯೋಗದ ಸದಸ್ಯರಾದ
ಡಾ. ಡಿ.ಎನ್. ತಿವಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.