ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಶುಕ್ರವಾರ 13.9.1996

Last Updated 12 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಹಿಳೆಯರಿಗೆ ಮೀಸಲು ಮಸೂದೆ ಮಂಡನೆ

ನವದೆಹಲಿ, ಸೆ. 12 (ಯುಎನ್‌ಐ)– ಲೋಕಸಭೆಯಲ್ಲಿ ಹಾಗೂ ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದರು.

ಇದು ಸಂವಿಧಾನಕ್ಕೆ 81ನೇ ತಿದ್ದುಪಡಿಯಾಗಲಿದೆ.

ಸದನದಲ್ಲಿ ಪ್ರಶ್ನೋತ್ತರ ವೇಳೆಯನ್ನು ರದ್ದುಪಡಿಸಿದ ಸ್ಪೀಕರ್ ಪಿ.ಎ. ಸಂಗ್ಮಾ ಅವರು, ಈ ಮಸೂದೆ ಮಂಡಿಸಲು ಪ್ರಧಾನಿಯವರಿಗೆ ಅವಕಾಶ ಮಾಡಿ ಕೊಟ್ಟು ಸದನದ ಕಾರ್ಯಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಿದರು.

ಪ್ರಧಾನಿ ಅವರು ಈ ಮಸೂದೆಯನ್ನು ಏಕಕಾಲಕ್ಕೆ ರಾಜ್ಯಭೆಯಲ್ಲೂ ಮಂಡಿಸಲು ಯತ್ನಿಸಿದಾಗ, ಏಕಕಾಲಕ್ಕೆ ಉಭಯ ಸದನಗಳಲ್ಲೂ ಈ ಮಸೂದೆ ಮಂಡಿಸಲು ಸಾಧ್ಯವಿಲ್ಲ ಎಂದು ರಾಜ್ಯಸಭೆ ಅಧ್ಯಕ್ಷ ಉಪರಾಷ್ಟ್ರಪತಿ ಕೆ.ಆರ್. ನಾರಾಯಣನ್ ತಿಳಿಸಿದರು.

ಐದು ಬಸ್ಸುಗಳಿಗೆ ಬೆಂಕಿ ಗೋಲಿಬಾರ್, 1 ಸಾವು

ಸಕಲೇಶಪುರ, ಸೆ. 12– ಇಲ್ಲಿಯ ಬಸ್‌ ನಿಲ್ದಾಣದಲ್ಲಿ ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸತ್ತ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜನರು ಹಿಂಸಾ ಚಾರಕ್ಕೆ ಇಳಿದು ಬಸ್ ನಿಲ್ದಾಣ ಧ್ವಂಸಗೊಳಿಸಿ ದರು. ಗೋಲಿಬಾರ್‌ನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಐದು ಸರ್ಕಾರಿ ಬಸ್‌ಗಳು ರೋಷಕ್ಕೆ ಭಸ್ಮವಾಗಿವೆ.

ಬಸ್ ಡಿಕ್ಕಿಯಲ್ಲಿ ಮತ್ತೊಬ್ಬರ ಕಾಲು ಮುರಿದಿದ್ದು ಗೋಲಿಬಾರ್‌ನಲ್ಲಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT