ಮಂಗಳವಾರ, ಜನವರಿ 31, 2023
18 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಶನಿವಾರ, 2-12-1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ– ಪಾಕ್‌ಗಳಿಂದ ಯುದ್ಧ ಕೈದಿಗಳು ಸ್ವದೇಶಗಳಿಗೆ ವಾಪಸ್

ಅಮೃತಸರ, ಡಿ. 1– ಕಳೆದ ವರ್ಷ ಡಿಸೆಂಬರ್ ಸಮರದಲ್ಲಿ ಸೆರೆಹಿಡಿಯಲಾದ ಯುದ್ಧ ಬಂದಿಗಳನ್ನು ಇಂದು ಭಾರತ– ಪಾಕಿಸ್ತಾನ ವಾಘಾ ಗಡಿ ಮೂಲಕ ಸ್ವದೇಶಕ್ಕೆ ವಾಪಸು ಕಳುಹಿಸಿದವು.

ಸುಮಾರು 540 ಪಾಕಿಸ್ತಾನಿ ಯುದ್ಧ ಬಂದಿಗಳನ್ನು 19 ತಂಡಗಳಲ್ಲಿ ಭಾರತ ಪಾಕಿಸ್ತಾನದ ವಶಕ್ಕೊಪ್ಪಿಸಿತು. ಪಾಕಿಸ್ತಾನ 616 ಮಂದಿ ಭಾರತೀಯ ಯೋಧರನ್ನು ಭಾರತದ ವಶಕ್ಕೊಪ್ಪಿಸಿತು.

ಭೂಸುಧಾರಣೆ ಮಸೂದೆ: ವಿಧಾನಮಂಡಲಕ್ಕೆ ಪರಮಾಧಿಕಾರ– ಕಂದಾಯ ಸಚಿವರ ಸ್ಪಷ್ಟನೆ

ಬೆಂಗಳೂರು, ಡಿ.1– ಭೂಸುಧಾರಣೆ ಮಸೂದೆ ವಿರುದ್ಧ ಕಾಂಗ್ರೆಸ್ ಪಕ್ಷದ ಕೆಲವು ಸಿರಿವಂತ ಜಮೀನ್ದಾರರು ಚಳವಳಿ ಮಾರ್ಗ ಅನುಸರಿಸುತ್ತಿರುವರೆಂಬ ವಿಚಾರ ಸರ್ಕಾರಕ್ಕೆ ಅಧಿಕೃತವಾಗಿ ತಿಳಿದು ಬಂದಿಲ್ಲವೆಂದೂ ಮಸೂದೆಯ ಬಗ್ಗೆ ತೀರ್ಮಾನ ತೆಗೆದು ಕೊಳ್ಳುವ ಪರಮಾಧಿಕಾರ ಕೇವಲ ವಿಧಾನ ಮಂಡಲಕ್ಕೆ ಮಾತ್ರ ಇದೆಯೆಂದೂ ಕಂದಾಯ ಸಚಿವ ಶ್ರೀ ಎನ್. ಹುಚ್ಚಮಾಸ್ತಿಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಶ್ರೀ ಎಚ್‌.ಕೆ. ವೀರಣ್ಣಗೌಡ ಅವರಂತಹ  ಕಾಂಗ್ರೆಸ್ ನಾಯಕರು ದೊಡ್ಡ ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆಯೆಂದು ಶ್ರೀ ಎಂ.ಎಸ್. ಕೃಷ್ಣನ್ ಅವರು ಕೇಳಿದಾಗ ಸಚಿವರು ತಾವೂ ಅದನ್ನು ಪತ್ರಿಕೆಗಳಲ್ಲಿ ನೋಡಿರುವುದಾಗಿಯೂ ಪತ್ರಿಕೆಗಳಲ್ಲಿ ಬಂದದ್ದೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಕಷ್ಟವಾಗುವುದೆಂದೂ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು