45 ಕೋಟಿ ರೂಪಾಯಿ ಗೆದ್ದ ದೆಹಲಿ ಕನ್ನಡಿಗ

ನವದೆಹಲಿ, ಅ. 20 (ಪಿಟಿಐ)– ಮುಂಬಯಿಯ ಹರ್ಷವರ್ಧನ್ ನವಾಟೆ ಅವರು, ಸ್ಟಾರ್ ಟಿ.ವಿಯ ‘ಕೌನ್ ಬನೇಗಾ ಕರೋಡ್ ಪತಿ’ (ಕೆಬಿಸಿ) ಮೂಲಕ ಕೋಟ್ಯಧೀಶನಾದ ಬೆನ್ನಲ್ಲೇ ಇಲ್ಲಿನ ಮೊಹಮ್ಮದ್ ಕರೀಮ್ ಭಾಷಾ, ನವಾಟೆಗಿಂತ ಹಲವು ಹೆಜ್ಜೆ ಮುಂದೆ ಹೋಗಿ 45 ಕೋಟಿ ರೂಪಾಯಿಗಳಿಗೆ ಒಡೆಯರಾಗಿದ್ದಾರೆ.

ದೆಹಲಿಯಲ್ಲಿ ಸಂಸದೀಯ ವರದಿಗಾರರಾಗಿರುವ, ಮೂಲತಃ ಕರ್ನಾಟಕದ ಬಳ್ಳಾರಿಯವರಾದ ಭಾಷಾ, ಫ್ರೀಲೊಟ್ಟೊ ಡಾಟ್ ಕಾಮ್ನ ‘ಸುಪರ್ಬಕ್ಸ್’ ಜಾಕ್ಪಾಟ್ ಕಾರ್ಯಕ್ರಮದಲ್ಲಿ ಹತ್ತು ದಶಲಕ್ಷ ಅಮೆರಿಕನ್ ಡಾಲರ್ (ಸುಮಾರು 45 ಕೋಟಿ ರೂಪಾಯಿ) ಗೆದ್ದಿದ್ದಾರೆ.

ಕಾಶ್ಮೀರ ಉಗ್ರರ ಜತೆ ಚರ್ಚೆಗೆ ಸಿದ್ಧ: ಅಡ್ವಾಣಿ

ನವದೆಹಲಿ, ಅ. 20 (ಯುಎನ್ಐ)– ಶಸ್ತ್ರಾಸ್ತ್ರ ಬದಿಗಿಟ್ಟು ಬರುವ ಕಾಶ್ಮೀರ ಕಣಿವೆಯ ಉಗ್ರಗಾಮಿಗಳೊಂದಿಗೆ ಶಾಂತಿ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಎಲ್.ಕೆ. ಅಡ್ವಾಣಿ ಪುನರುಚ್ಚರಿಸಿದರು.

ಗೃಹ ಸಚಿವ ಖಾತೆಯ ಸಂಸತ್ ಸದಸ್ಯರ ಸಲಹಾ ಸಮಿತಿಯಲ್ಲಿ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.