ಸೋಮವಾರ, ಸೆಪ್ಟೆಂಬರ್ 26, 2022
20 °C

50 ವರ್ಷಗಳ ಹಿಂದೆ: ಬುಧವಾರ 9.8.1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಲೆ ಏರಿಕೆ: ಸರ್ಕಾರದ ಕ್ರಮಗಳ
ಬಗ್ಗೆ ವಿರೋಧ ಪಕ್ಷಗಳ ಅತೃಪ್ತಿ

ನವದೆಹಲಿ, ಆ. 8– ಆಹಾರ ಧಾನ್ಯಗಳ ಬೆಲೆ ಪರಿಸ್ಥಿತಿ ವಿಷಯದಲ್ಲಿ ಸರ್ಕಾರ ವ್ಯವಹರಿಸು ತ್ತಿರುವ ರೀತಿ ಬಗ್ಗೆ ವಿರೋಧ ಪಕ್ಷದ
ಸದಸ್ಯರೆಲ್ಲರೂ ಹೆಚ್ಚು ಕಡಿಮೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಬಳಕೆದಾರರಿಗೆ ಪರಿಹಾರ ಒದಗಿಸಲು ಅಗತ್ಯ ವಸ್ತುಗಳ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸಿಪಿಐ ಮತ್ತು ಸೋಷಲಿಸ್ಟ್ ಪಕ್ಷದವರೂ ಸೇರಿ ಕೆಲವು ಮಂದಿ ಸದಸ್ಯರು ಸಲಹೆ ಮಾಡಿದ್ದಾರೆ.

ಇಂದಿರಾ ದೈವ ನಂಬಿಕೆ

ಮುಂಬೈ, ಆ. 8– ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ದೇವರಲ್ಲಿ ನಂಬಿಕೆ ಇದೆ. ಆದರೆ, ಜ್ಯೋತಿಷದಲ್ಲಿ ಇಲ್ಲ.

‘ಇಲಸ್ಟ್ರೇಟೆಡ್ ವೀಕ್ಲಿ’ ಪತ್ರಿಕೆಯ ಸ್ವಾತಂತ್ರ್ಯೋತ್ಸವ ವಿಶೇಷಾಂಕಕ್ಕೆ ಖುಷವಂತ್ ಸಿಂಗ್ ಅವರಿಗೆ ನೀಡಿದ ಸಂದರ್ಶನ
ದಲ್ಲಿ ಪ್ರಧಾನಿಯವರು ‘ನನಗೆ ದೇವರಲ್ಲಿ ನಂಬಿಕೆ ಇದೆಯಾದರೂ, ಗಡ್ಡ ಧರಿಸಿ ಕುಳಿತ ಮನುಷ್ಯನ ರೂಪದಲ್ಲಿಲ್ಲ...’ ಎಂದರು.

‘ಜ್ಯೋತಿಷದಲ್ಲಿ ನಿಮಗೆ ಇದೆಯೇ?’ ಎಂಬ ಪ್ರಶ್ನೆಗೆ, ‘ಇಲ್ಲ. ಎಳ್ಳಷ್ಟೂ ಇಲ್ಲ. ಜ್ಯೋತಿಷವನ್ನು ನಂಬಿ ಅದರ ಆಧಾರದ ಮೇಲೆ ಯಾರೂ ತಮ್ಮ ಕೆಲಸ ಕಾರ್ಯನಿರ್ವಹಿಸಬಾರದು. ಆದರೆ, ಜನತೆ ಜ್ಯೋತಿಷದಲ್ಲಿ ಆಸಕ್ತಿ ಹೊಂದಿ ಅದರ ಬೆನ್ನು ಹತ್ತಿದರೆ ನನ್ನದೇನೂ ಅಭ್ಯಂತರವಿಲ್ಲ’ ಎಂದು ಪ್ರಧಾನಿ ಖಚಿತವಾಗಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು