ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ 5–1–1972

Last Updated 5 ಜನವರಿ 2022, 19:30 IST
ಅಕ್ಷರ ಗಾತ್ರ

‘ಯುದ್ಧ ಇನ್ನೂ ಮುಗಿದಿಲ್ಲ’ ಇಂದಿರಾ ಸ್ಪಷ್ಟನೆ

ಕೊಲ್ಲಾಪುರ, ಜ. 5– ಯಾವುದೇ ರೀತಿಯ ಕಷ್ಟ ಪರಿಸ್ಥಿತಿ ಎದುರಿಸಲು ಸದಾ ಜಾಗೃತವಾಗಿರಬೇಕೆಂದು ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ಕರೆ ಇತ್ತರು.

’ಮುಂದಿನ ಕೆಲವು ತಿಂಗಳುಗಳಲ್ಲಿ ಏನು ಆಗುತ್ತದೆ ಎಂತಹ ಕಷ್ಟದ ಪರಿಸ್ಥಿತಿ ತಲೆ ಹಾಕುತ್ತದೆ ಎನ್ನುವುದುನ್ನು ಹೇಳಲಾಗುವುದಿಲ್ಲ. ಮತ್ತೆ ಯುದ್ಧ ಸಂಭವಿಸಿದಲ್ಲಿ ನಾವು ಅದಕ್ಕೆ ಸಿದ್ಧವಾಗಿರಲೇಬೇಕು’ ಎಂದು ಅವರು ಘೋಷಿಸಿದರು.

ನ್ಯಾಯ ಚುನಾವಣೆ ಸರ್ಕಾರಿ ನೌಕರರ ಹೊಣೆ: ರಾಜ್ಯಪಾಲರ ಕರೆ

ಬೆಂಗಳೂರು, ಜ. 5– ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಗಳು ಯಾವುದೇ ಬಿಕ್ಕಟ್ಟು ಅಥವಾ ಆಕ್ಷೇಪಣೆಗಳಿಗೆ ಅವಕಾಶ ನೀಡದ ನ್ಯಾಯವಾಗಿ ನಡೆಯುವಂತೆ ನೋಡಿಕೊಳ್ಳವುದು ಸರ್ಕಾರಿ ನೌಕರರ ಹೊಣೆ ಎಂದು ರಾಜ್ಯಪಾಲ ಧರ್ಮವೀರ ಅವರು ಇಂದು ಇಲ್ಲಿ ಹೇಳಿ ಎಲ್ಲರ ವರ್ಗದ ನೌಕರರು ಪಕ್ಷಾತೀತವಾಗಿ ವರ್ತಿಸಬೇಕೆಂದು ಕರೆ ನೀಡಿದರು.

ವಿಧಾನಸೌಧದಲ್ಲಿ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯಪಾಲರುಚುನಾವಣೆ ಸಮಯದಲ್ಲಿ ಅನೇಕ ಕಡೆ ಶಾಂತಿ ಮತ್ತು ಕಾನೂನು ಪಾಲನೆಯ ಸಮಸ್ಯೆ ತಲೆದೋರುವ ಭೀತಿ ಇರುವುದರಿಂದ ಜಿಲ್ಲಾಧಿಕಾರಿಗಳು ಎಚ್ಚರವಹಿಸಿ ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT