ಬುಧವಾರ, ಜುಲೈ 6, 2022
23 °C

25 ವರ್ಷಗಳ ಹಿಂದೆ: ಬುಧವಾರ, 21.5.1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 ವರ್ಷಗಳ ಹಿಂದೆ

ವಿದೇಶಿ ಹಣ: ತನಿಖೆ ಬಳಿಕ ಗೌಡರ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದ ಕಾಂಗ್ರೆಸ್

ನವದೆಹಲಿ, ಮೇ 20 (ಪಿಟಿಐ)– ‘ವಿದೇಶಿ ಕಂಪೆನಿಗಳಿಂದ ಕಾಂಗ್ರೆಸ್ ಪಕ್ಷವು 3.75 ಕೋಟಿ ರೂಪಾಯಿ ಹಣ ಪಡೆದದ್ದಕ್ಕಾಗಿ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವ ಇಂಧ್ರಜಿತ್ ಗುಪ್ತಾ ಅವರು ಮಾರ್ಚ್ 27ರಂದು ಅನುಮತಿ ನೀಡಿದರು. ಇದಾದ ಮೂರು ದಿನಗಳ ಬಳಿಕ ಕಾಂಗ್ರೆಸ್ ಪಕ್ಷವು ದೇವೇಗೌಡರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತು’ ಎಂದು ದೆಹಲಿಯ ಹೈಕೋರ್ಟಿಗೆ ಇಂದು ಕೇಂದ್ರ ಸರ್ಕಾರ ತಿಳಿಸಿತು.

ಸರ್ಕಾರದ ಪರವಾಗಿ ಇಂದು ನ್ಯಾಯಾಲಯದಲ್ಲಿ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ ಡಾ. ಅಭಿಷೇಕ್ ಮನು ಸಿಂಘ್ವಿ ಈ ವಿಷಯವನ್ನು ತಿಳಿಸಿದರು. ‘ಗೃಹ ಸಚಿವರ ಅನುಮತಿ ಬಳಿಕ ಮಾರ್ಚ್ 29ರಂದು ಈ ವಿದೇಶಿ ದೇಣಿಗೆಯ ಬಗ್ಗೆ ಫೆರಾ ಅಧಿಕಾರಿಗಳು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದರು. 30ರಂದು ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಲಾಯಿತು’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು