ಬೆಂಗಳೂರು, ಅ. 29– ಸಾಹಿತ್ಯಕ್ಕೆ ಜಿ.ಎಸ್. ಆಮೂರ ಮತ್ತು ಜಿ.ಎಚ್. ನಾಯಕ್, ಸಂಗೀತಕ್ಕೆ ಕೃಷ್ಣ ಹಾನಗಲ್, ರಂಗಭೂಮಿಗೆ ಉಮಾಶ್ರೀ ಮತ್ತು ಕೃಷಿಗೆ ಎಸ್.ಸಿ. ಪಾಟೀಲ್ ಸೇರಿದಂತೆ ಸುಮಾರು 55 ಮಂದಿ ಗಣ್ಯರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗಳನ್ನು ನಾಳೆ ಪ್ರಕಟಿಸುವ ಸಂಭವವಿದೆ.

ಪ್ರಶಸ್ತಿಗಾಗಿ ಸುಮಾರು 4,000 ಅರ್ಜಿಗಳು ಬಂದಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಪರಿಶೀಲಿಸಿದ ಸಮಿತಿಯು 55ಕ್ಕೆ ಸೀಮಿತಗೊಳಿಸಿ, ಸಿದ್ಧಗೊಳಿಸಿದ್ದ ಪಟ್ಟಿಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಇಂದು ರಾತ್ರಿ ಒಪ್ಪಿಗೆ ನೀಡಿದ್ದು ನಾಳೆ, ಪಟ್ಟಿಯು ಪ್ರಕಟವಾಗಲಿದೆ.

ಸೋನಿಯಾ ಗಾಂಧಿಗೆ ಜಿತೇಂದ್ರ ಪ್ರಸಾದ ಸವಾಲು

ನವದೆಹಲಿ, ಅ. 29– ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಜಿತೇಂದ್ರ ಪ್ರಸಾದ ಇಂದು ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇಂದಿರಾಗಾಂಧಿ–ನೆಹರೂ ಕುಟುಂಬದ ಸದಸ್ಯೆಯನ್ನು ಎದುರಿಸುವ ಸವಾಲು ಸ್ವೀಕರಿಸಿದ್ದಾರೆ.