ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯಜ್ಞಾನ ಮುಖ್ಯ, ಭಾಷೆಯಲ್ಲ

Last Updated 14 ಜೂನ್ 2021, 19:31 IST
ಅಕ್ಷರ ಗಾತ್ರ

ಎಂಜಿನಿಯರಿಂಗ್ ಪದವಿಯನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಬೇರೆ ರಾಜ್ಯ ಅಥವಾ ದೇಶಗಳಲ್ಲಿ ಉದ್ಯೋಗವನ್ನು ಪಡೆಯುವುದು ಹಾಗೂ ಮಾಡುವುದು ಕಷ್ಟವಾಗುತ್ತದೆ ಎಂದು ಅರ್ಚನಾ ಶಂಕರ್ ಅವರು ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಜೂನ್ 12). ಇದೊಂದು ಅನಗತ್ಯ ಆತಂಕವಷ್ಟೆ.

ವಿದೇಶದಲ್ಲಿ ವಿಜ್ಞಾನಿಯಾಗಿರುವ ಬೆಂಗಾಲಿ ಭಾಷಿಕ ಭೌತಶಾಸ್ತ್ರ ಪ್ರಾಧ್ಯಾಪಕರೊಬ್ಬರು ಒಮ್ಮೆ ಕೋಲ್ಕತ್ತಕ್ಕೆ ಆಗಮಿಸಿದ್ದಾಗ, ಅಲ್ಲಿನ ಭೌತಶಾಸ್ತ್ರ ಉಪನ್ಯಾಸಕರೊಬ್ಬರು ಭೌತಶಾಸ್ತ್ರವನ್ನು ಬೆಂಗಾಲಿಯಲ್ಲಿ ಬೋಧನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರಂತೆ. ಅದಕ್ಕವರು, ಭೌತಶಾಸ್ತ್ರವನ್ನು ಬೆಂಗಾಲಿಯಲ್ಲಿ ಬೋಧಿಸಲಾಗದಿದ್ದರೆ ಆ ಉಪನ್ಯಾಸಕನಿಗೆ ಬೆಂಗಾಲಿ ಭಾಷೆ ಬರದು ಅಂತ ಅಲ್ಲ, ಭೌತಶಾಸ್ತ್ರವೇ ಗೊತ್ತಿಲ್ಲ ಅಂತ ಅರ್ಥ ಎಂದು ಉತ್ತರಿಸಿದರಂತೆ.

ವಿಷಯಜ್ಞಾನ ಚೆನ್ನಾಗಿ ಇದ್ದರೆ ಯಾವ ಭಾಷೆಯಲ್ಲಿ (ಅದು ಸುಮಾರಾಗಿ ಗೊತ್ತಿದ್ದರೂ) ಬೇಕಾದರೂ ಸಂವಹನ ಮಾಡಲು ಸಾಧ್ಯ ಎಂಬ ವಾಸ್ತವವನ್ನು ನಾವು ಮನಗಾಣಬೇಕಾಗಿದೆ. ಒಂದು ಭಾಷೆಯಾಗಿ ಇಂಗ್ಲಿಷ್ ಅನ್ನು ಕಲಿಯುವುದು ಕಷ್ಟವಲ್ಲವೇ ಅಲ್ಲ. ಎಂತಹ ಕಠಿಣ ಪರಿಕಲ್ಪನೆಗಳನ್ನಾದರೂ ನಮ್ಮದೇ ಭಾಷೆಯಲ್ಲಿ ಅಧ್ಯಯನ ಮಾಡಿದರೆ, ಅದನ್ನು ಅನುಭವದ ಮಟ್ಟದಲ್ಲಿ ಗ್ರಹಿಸಿಕೊಳ್ಳುವುದು ಸುಲಭ. ಆಗ ಆತ ತನ್ನ ವೃತ್ತಿಯನ್ನು
ಆತ್ಮವಿಶ್ವಾಸದಿಂದಷ್ಟೇ ಅಲ್ಲ ಸೃಜನಶೀಲವಾಗಿಯೂ ನಿರ್ವಹಿಸಬಲ್ಲವನಾಗುತ್ತಾನೆ. ಇಂದು ಜಪಾನ್, ಜರ್ಮನಿ, ಚೀನಾ ಮುಂತಾದ ದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರು ಅಲ್ಲಿನ ಭಾಷೆಗಳನ್ನು ಅಲ್ಪ ಸ್ವಲ್ಪ ಕಲಿತು ಕಾರ್ಯ ನಿರ್ವಹಿಸುತ್ತಿಲ್ಲವೇ? ಇಂಗ್ಲಿಷ್ ಎಂಬ ಮಾಯಾಮೃಗವನ್ನು ಬೆನ್ನಟ್ಟುವ ಭ್ರಮೆಯನ್ನು ಬಿಡೋಣ.⇒

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT