ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸ ರದ್ದು: ವೈಜ್ಞಾನಿಕ ಚಿಂತನೆಗೆ ಅಪಚಾರ

Last Updated 12 ಮಾರ್ಚ್ 2020, 19:40 IST
ಅಕ್ಷರ ಗಾತ್ರ

ಕನ್ನಡದ ಹೆಸರಾಂತ ಕೃಷಿ ವಿಜ್ಞಾನಿ ಮತ್ತು ಸಾಹಿತಿ ಪ್ರೊ. ಕೆ.ಎನ್.ಗಣೇಶಯ್ಯನವರು ತನ್ನಲ್ಲಿ ನೀಡಬೇಕಿದ್ದ ಉಪನ್ಯಾಸ ಕಾರ್ಯಕ್ರಮವೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯು ರದ್ದು ಮಾಡಿದೆ ಎಂಬ ಸುದ್ದಿಯು ಪತ್ರಿಕೆಗಳಲ್ಲಿ ಮತ್ತು ಇತರ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ.

ಆ ಉಪನ್ಯಾಸದ ವಿಷಯದ ವೈಜ್ಞಾನಿಕತೆಗೆ ಸಂಬಂಧಿಸಿದಂತೆ ಪ್ರೊ. ಗಣೇಶಯ್ಯನವರ ಅಭಿಪ್ರಾಯಗಳನ್ನಾಗಲಿ, ಅವರ ತೀರ್ಮಾನಗಳನ್ನಾಗಲಿ ಪುರಸ್ಕರಿಸಲು ಅಥವಾ ತಿರಸ್ಕರಿಸಲು ಬೇಕಾದ ವಿಷಯತಜ್ಞತೆ ನಮಗಿಲ್ಲ. ಆದರೆ, ಅವರ ಉಪನ್ಯಾಸ ಕಾರ್ಯಕ್ರಮವನ್ನು ರದ್ದು ಮಾಡುವುದರ ಮೂಲಕ ಸಂಸ್ಥೆಯು ಮುಕ್ತ ವೈಜ್ಞಾನಿಕ ಚಿಂತನೆ ಮತ್ತು ಚರ್ಚೆಗೆ ಅಪಚಾರವೆಸಗಿದೆ ಎಂದು ಹೇಳಬೇಕಿದೆ.

ವರದಿಗಳು ಹೇಳುವಂತೆ, ಪ್ರೊ. ಗಣೇಶಯ್ಯ ಅವರು ತಮ್ಮ ಆ ಉಪನ್ಯಾಸವನ್ನು, ಅಮೆರಿಕೆಯ ಸುಪ್ರಸಿದ್ಧ ವೈಜ್ಞಾನಿಕ ಸಂಸ್ಥೆಯಾದ ಮಸಾಚ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಈಗಾಗಲೇ ಪ್ರಕಟಿಸಿರುವ ಸಂಶೋಧನೆಯನ್ನು ಆಧರಿಸಿ ನೀಡಲಿದ್ದರು. ಆ ಉಪನ್ಯಾಸವು ನಡೆದಿದ್ದಿದ್ದರೆ, ಅದನ್ನು ಕೇಳಿಸಿಕೊಂಡವರು ಖಂಡಿತವಾಗಿಯೂ ಗಣೇಶಯ್ಯನವರು ತಮ್ಮ ಮುಂದಿಟ್ಟ ದತ್ತಾಂಶಗಳು ಹಾಗೂ ಮಾಹಿತಿಯನ್ನು, ಅದನ್ನು ಆಧರಿಸಿ ಅವರು ಮಾಡಿದ ವಿಶ್ಲೇಷಣೆಯನ್ನು, ಮುಂದಿಟ್ಟ ಹೊಳಹುಗಳನ್ನು ಹಾಗೂ ನೀಡಿದ ತೀರ್ಮಾನಗಳನ್ನು ಪ್ರಶ್ನಿಸಬಹುದಿತ್ತು. ಅದು ನಿಜಕ್ಕೂ ಸರಿಯಾದ ಕ್ರಮವಾಗಿರುತ್ತಿತ್ತು. ಆದರೆ, ಆ ಕಾರ್ಯಕ್ರಮವನ್ನು ಇಲ್ಲಸಲ್ಲದ ಕಾರಣಗಳಿಂದಾಗಿ ರದ್ದು ಮಾಡಲಾಗಿದೆ.

ತಮ್ಮ ಸಂಶೋಧನೆಯನ್ನು ಆಧರಿಸಿ ಹಿರಿಯ ವಿಜ್ಞಾನಿಯೊಬ್ಬರು ಬಹಳ ಜವಾಬ್ದಾರಿಯಿಂದ ನೀಡಲಿದ್ದ ಉಪನ್ಯಾಸಕ್ಕೂ, ಅಗ್ಗದ ರಾಜಕಾರಣದ ಹಸಿಬಿಸಿ ಭಾಷಣಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಕಾಣಲಾರದಷ್ಟು ಕುರುಡಾಗಿದ್ದೇವೆಯೇ ನಾವು?

-ರಘುನಂದನ, ನಾಗೇಶ ಹೆಗಡೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT