ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ಅಧಿಕಾರ: ವಿವೇಚನೆ ಇರಲಿ

Last Updated 6 ಜೂನ್ 2019, 19:02 IST
ಅಕ್ಷರ ಗಾತ್ರ

ದಲಿತ ವ್ಯಕ್ತಿಗೆ ಮುಖ್ಯಮಂತ್ರಿ, ಮಂತ್ರಿ ಸ್ಥಾನ ನೀಡಬೇಕೆಂಬ ವಿಚಾರ ಮತ್ತೊಮ್ಮೆ ಚರ್ಚೆಯ ವಸ್ತುವಾಗಿದೆ. ಈ ಕುರಿತು ವಿವಿಧ ಪಕ್ಷಗಳ ನಾಯಕರು ಟ್ವಿಟರ್‌ನಲ್ಲಿ ಜಗಳವಾಡುತ್ತಿದ್ದಾರೆ. ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಇಡಬಹುದಾದ ಒಂದು ಮಹತ್ತರ ಹೆಜ್ಜೆ ಇದು. ಇಂತಹ ವಿಚಾರವು ರಾಜಕೀಯ ಮೇಲಾಟವಾಗಿ ಮಾರ್ಪಟ್ಟಿರುವುದು ದುರದೃಷ್ಟಕರ.

ಈ ಚರ್ಚೆಯಲ್ಲಿ ದಲಿತರ ಬಗೆಗಿನ ನಿಜ ಕಾಳಜಿಗಿಂತಲೂ ಕೆಸರೆರಚಾಟ ಮತ್ತು ಸ್ವಾರ್ಥಸಾಧನೆಯೇ ಎದ್ದು ಕಾಣುತ್ತಿದೆ. ದಲಿತರಿಗೆ ರಾಜಕೀಯ ಸ್ಥಾನಮಾನ ನೀಡುವುದರಿಂದ ನಮ್ಮ ಸಾಮಾಜಿಕ ಪರಿಸರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಸಾಧ್ಯ. ಅದನ್ನು ರಚನಾತ್ಮಕ ನೆಲೆಯಲ್ಲಿ ಪರಿಭಾವಿಸುವ ಪಕ್ವತೆಯನ್ನು ಜನಸಮುದಾಯದಲ್ಲಿ ಮೂಡಿಸಬೇಕು. ಮೇಲಿನ ಮಟ್ಟದಲ್ಲಿ ಯಾರೋ ಒಬ್ಬರಿಗೆ ಸ್ಥಾನಮಾನ ಕಲ್ಪಿಸುವುದಕ್ಕೆ ಇದು ಸೀಮಿತವಾಗಬಾರದು. ಒಬ್ಬ ಸಾಮಾನ್ಯ ದಲಿತನೂ ತಳಮಟ್ಟದಲ್ಲಿ ನೀತಿ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು.

ರಾಧಿಕಾ,ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT