ಶುಕ್ರವಾರ, ಡಿಸೆಂಬರ್ 9, 2022
21 °C

ನಡೆಯಲಿ ಜನಜಾಗೃತಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹಿಂದೂಗಳು ಶಸ್ತ್ರಗಳನ್ನು ಪೂಜಿಸಿದರೆ ಸಾಲದು, ಬಳಸುವುದನ್ನೂ ಕಲಿಯಬೇಕು’ ಎಂಬ ವಿಎಚ್‌ಪಿ ಮುಖಂಡರೊಬ್ಬರ ಹೇಳಿಕೆಗೆ ‘ಸಾಮಾನ್ಯರಿಗೇಕೆ ಶಸ್ತ್ರ ಬಳಕೆ’ ಎಂದು ತಾ.ಸಿ.ತಿಮ್ಮಯ್ಯ ಅವರು ಕೇಳಿರುವುದು (ವಾ.ವಾ., ಅ. 7) ದೇಶದ ಶಾಂತಿ– ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವಲ್ಲಿ ಓದುಗರಿಗೆ ಒಳ್ಳೆಯ ಸಂದೇಶ ನೀಡಿದೆ. ದ್ವೇಷಭಾಷಣ, ಪ್ರಚೋದನಾ ಭಾಷಣ ತಡೆಯುವಲ್ಲಿ ಮತ್ತು ದ್ವೇಷ ಹರಡುವವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿವೆ. ದ್ವೇಷ ಹರಡುವವರ ವಿರುದ್ಧ ಜನಜಾಗೃತಿ ಅಭಿಯಾನಗಳು ನಡೆಯಬೇಕು.

-ಹುಸೇನಬಾಷಾ ತಳೇವಾಡ, ಹುಬ್ಬಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.