ಗುರುವಾರ , ಮೇ 6, 2021
23 °C

ಸಿರಿವಂತರಿಗೆ ಅನ್ವಯಿಸದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಬೆಳ್ಳಂದೂರು ಹಾಗೂ ಕರಿಯಮ್ಮನ ಅಗ್ರಹಾರ ಪ್ರದೇಶಗಳಲ್ಲಿ ಬಡವರು ಕಟ್ಟಿಕೊಂಡಿದ್ದ ಜೋಪಡಿಗಳನ್ನು ಬಾಂಗ್ಲಾ ವಲಸಿಗರ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ನೆಲಸಮಗೊಳಿಸಿದ ವರದಿಯನ್ನು(ಪ್ರ.ವಾ., ಜ. 21) ಓದಿ ಮನಸ್ಸಿಗೆ ತುಂಬಾ ನೋವಾಯಿತು. ಕೇವಲ ಬಡವರಿಗೆ ಕಾನೂನು ಅನ್ವಯಿಸುತ್ತದೆ.

ವಿಪರ್ಯಾಸವೆಂದರೆ, ಸಿರಿವಂತರ ಸನಿಹಕ್ಕೂ ಅದು ತೆರಳುವುದಿಲ್ಲ. ಒಂದು ವೇಳೆ ತೆರಳಿದರೂ ಅದರಲ್ಲಿ ರಾಜಕೀಯ ದ್ವೇಷ ಅಡಗಿರುತ್ತದೆ. ಇಂತಹ ಸ್ಥಿತಿಯಲ್ಲಿ, ಈ ಸಂತ್ರಸ್ತರಿಗೆ ವಾಸಿಸಲು ಸೂಕ್ತ ಸ್ಥಳ ಸಿಗುವವರೆಗೂ ಮಾಧ್ಯಮಗಳು ಈ ವಿಷಯವನ್ನು ಬಿಡಬಾರದು. ಬಡವರ ಧ್ವನಿಯಾಗಿ ಅವು ಕೆಲಸ ಮಾಡಬೇಕು.

-ರಾಧಿಕಾ ಹರ್ಲಾಪುರ್, ಹುಬ್ಬಳ್ಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು