ಶುಕ್ರವಾರ, ಜೂನ್ 5, 2020
27 °C

ವಾಚಕರ ವಾಣಿ| ಇವರೂ ಕೊರೊನಾ ವಾರಿಯರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಪೊಲೀಸರ ಜೊತೆಗೆ ಕೊರೊನಾ ವಾರಿಯರ್ಸ್‌ ಎಂದು ನಾವು ಕರೆಯಬೇಕಾದ ಇನ್ನೊಂದು ವರ್ಗವೆಂದರೆ ಬ್ಯಾಂಕ್ ಸಿಬ್ಬಂದಿ. ಲಾಕ್‍ಡೌನ್ ಘೋಷಣೆಯಾದಾಗಿನಿಂದಲೂ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅವರಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ. ಜನ್‍ಧನ್ ಖಾತೆಗೆ ಸರ್ಕಾರ ಜಮಾ ಮಾಡಿದ ಹಣವನ್ನು ಪಡೆಯಲು ನೂಕುನುಗ್ಗಲು ಉಂಟಾದಾಗ ಸಹ ಬ್ಯಾಂಕಿನ ಸಿಬ್ಬಂದಿ ಅತ್ಯಂತ ಶಿಸ್ತುಬದ್ಧವಾಗಿ ಅದನ್ನು ನಿಭಾಯಿಸಿದ್ದು ಪ್ರಶಂಸನೀಯ.

ಅದೇ ರೀತಿ, ಈಗ ಕೇಂದ್ರ ಸರ್ಕಾರ ಘೋಷಿಸಿರುವ ₹ 20 ಲಕ್ಷ ಕೋಟಿಯ ಪ್ಯಾಕೇಜನ್ನು ಕಾರ್ಯರೂಪಕ್ಕೆ ತರುವಲ್ಲಿಯೂ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಬೇಕಿದೆ. ನೆಲಕಚ್ಚಿರುವ ಕೃಷಿ, ಔದ್ಯಮಿಕ, ಸಾಮಾಜಿಕ, ವಾಣಿಜ್ಯ ಕ್ಷೇತ್ರಗಳ ಚಟುವಟಿಕೆಗಳು ಗರಿಗೆದರಿ, ಪೇಟೆಯಲ್ಲಿ ಹಣದ ಚಲಾವಣೆ ಆಗಬೇಕಾದರೆ ಬ್ಯಾಂಕುಗಳು ಇನ್ನು ಮುಂದೆಯೂ ಕೊರೊನಾ ವಾರಿಯರ್ಸ್‌ ರೀತಿಯಲ್ಲೇ ಕೆಲಸ ಮಾಡಬೇಕಾಗಿದೆ. ಇದನ್ನೆಲ್ಲ ಪರಿಗಣಿಸಿ, ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಪ್ರಾಮುಖ್ಯ ನೀಡಬೇಕು.

-ಗಂಗಾಧರ ಅಂಕೋಲೆಕರ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು