ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಣಿ ಸಿಗುವುದೂ ದುಸ್ತರವಾದೀತು

ಅಕ್ಷರ ಗಾತ್ರ

ಗೋವು ಮತ್ತು ಗೋಮಾಂಸ ಭಕ್ಷಣೆಯ ವಿಚಾರದಲ್ಲಿ ಎಷ್ಟರಮಟ್ಟಿಗಿನ ಚರ್ಚೆ ನಡೆಯುತ್ತಿದೆಯೆಂದರೆ, ಅದು ರಾಜಕೀಯ ಮುಖಂಡರ ಮಧ್ಯೆ ವೈಯಕ್ತಿಕ, ಕೆಳಮಟ್ಟದ, ಏಕವಚನದ ಜಂಗಿ ಕುಸ್ತಿಗೂ ಕಾರಣವಾಗುತ್ತಿದೆ. ಗೋಮಾಂಸ ತಿನ್ನುವುದೇ ಸಾಧನೆಯೇ ಎಂದು ಒಬ್ಬರು ಕೇಳಿದರೆ, ನಾನು ಗೋವು, ಹಂದಿ ಮಾಂಸ ಏನಾದರೂ ತಿನ್ನುತ್ತೇನೆ ಎಂದು ಇನ್ನೊಬ್ಬರು ಸವಾಲು ಹಾಕುತ್ತಾರೆ. ಇವರುಗಳ ವಾದ ಏನೇ ಇರಲಿ, ಒಂದಂತೂ ಸತ್ಯ. ಇತ್ತೀಚಿನ ದಿನಗಳಲ್ಲಿ ಒಟ್ಟಾರೆ ಜಾನುವಾರುಗಳ ಸಂಖ್ಯೆಯೇ ತೀರಾ ಇಳಿಮುಖವಾಗುತ್ತಿದೆ.

ಹಿಂದೆ ಊರ ಹೊರಗೆ ದನಗಳು ಮೇಯಲು ಹೊರಟರೆ ಅವುಗಳ ಸಗಣಿ ಹಿಡಿಯುವುದಕ್ಕೆ ಮಹಿಳೆಯರು ಬುಟ್ಟಿ ಹಿಡಿದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಸ್ವಾಮಿ, ದನಗಳ ವಿಚಾರದಲ್ಲಿ ಯಾಕೆ ಬಡಿದಾಡುತ್ತೀರಿ? ಇನ್ನಷ್ಟು ದಿನಗಳು ಕಳೆದರೆ ನಮಗೆ ಎಮ್ಮೆ, ಹಸುಗಳ ಸಗಣಿಯೂ ಸಿಗುವುದಿಲ್ಲ. ಈಗಲೇ ನಗರ ಪ್ರದೇಶಗಳಲ್ಲಿ ಹಣ ಕೊಟ್ಟು ಸಗಣಿ ಖರೀದಿಸುತ್ತಾರೆ. ಗೃಹ ಪ್ರವೇಶದ ವೇಳೆ ಪೂಜೆಗಾಗಿ ಬಾಡಿಗೆ ಕೊಟ್ಟು ಹಸುವನ್ನು ಕರೆತರುತ್ತಾರೆ. ಇನ್ನು ಮುಂದೆ ಹೇಗೋ ದೇವರೇ ಬಲ್ಲ.

- ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT