ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಂತುಹುಳು ನಿವಾರಣಾ ದಿನ’: ‘ಮಾತ್ರೆ’ಗಳ ಬದಲಾಗಿ ‘ಚಾಕೊಲೆಟ್’ ನೀಡಿ!

Last Updated 30 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತಿ ವರ್ಷದಂತೆ ‘ಜಂತುಹುಳು ನಿವಾರಣಾ ದಿನ’ದ ಅಂಗವಾಗಿ ರಾಜ್ಯದ ಅಂಗನವಾಡಿ, ಸರ್ಕಾರಿ ಶಾಲೆ, ಖಾಸಗಿ ಶಾಲೆ ಸೇರಿದಂತೆ ಸುಮಾರು ಎರಡು ಕೋಟಿ ಮಕ್ಕಳಿಗೆ ಇತ್ತೀಚೆಗೆ ‘ಆಲ್ಬೆಂಡಜೋಲ್’ ಮಾತ್ರೆಗಳನ್ನು ನೀಡಿದೆ. ಸಾಮಾನ್ಯವಾಗಿ ಮಕ್ಕಳಿಗೆ ಮಾತ್ರೆಗಳೆಂದರೆ ಭಯ, ಅಲರ್ಜಿ. ಮಾತ್ರೆಯ ಹೆಸರು ಕೇಳಿದರೆ ಸಾಕು ಮಾರುದ್ದ ಜಿಗಿಯುತ್ತಾರೆ. ಈ ಕಾರಣದಿಂದಾಗಿ ಅದೆಷ್ಟೋ ಮಕ್ಕಳು ಈ ಮಾತ್ರೆಗಳನ್ನು ಸೇವಿಸುವಾಗ ವಾಂತಿ ಮಾಡಿಕೊಳ್ಳುತ್ತಾರೆ. ಇನ್ನು ಕೆಲವು ಮಕ್ಕಳು ಶಿಕ್ಷಕರು ಹಾಗೂ ಆರೋಗ್ಯ ಕಾರ್ಯಕರ್ತರ ಕಣ್ಣುತಪ್ಪಿಸಿ ಆ ಮಾತ್ರೆಗಳನ್ನು ಎಸೆದುಬಿಡುತ್ತಾರೆ. ಇನ್ನಷ್ಟು ಮಕ್ಕಳು ಕಷ್ಟಪಟ್ಟು ಅರ್ಧವನ್ನು ಮಾತ್ರ ತಿಂದು ನಂತರ ಉಗುಳಿಬಿಡುತ್ತಾರೆ. ಹೀಗಾಗಿ ಇಲಾಖೆಯ ‘ಜಂತುಹುಳು ನಿವಾರಣಾ ಗುರಿ’ ನಿರೀಕ್ಷಿತ ಮಟ್ಟ ತಲುಪದೇ ಇರಬಹುದು. ಆದ್ದರಿಂದ ಇದಕ್ಕೆ ಪರಿಹಾರವಾಗಿ ಇಲಾಖೆಯು ಮಕ್ಕಳ ಮನೋವೈಜ್ಞಾನಿಕ ತಳಹದಿಯ ಮೇಲೆ ಹೊಸ ವಿಧಾನವನ್ನು ಕಂಡುಕೊಳ್ಳಬೇಕಿದೆ.

ಮಕ್ಕಳಿಗೆ ಸಾಮಾನ್ಯವಾಗಿ ಚಾಕೊಲೆಟ್ ಎಂದರೆ ಇಷ್ಟ. ಈ ಜಂತುಹುಳು ನಿವಾರಣಾ ಮಾತ್ರೆಗಳನ್ನೇ ಬಣ್ಣ ಮತ್ತು ವಿನ್ಯಾಸದಲ್ಲಿ ಚಾಕೊಲೆಟ್‌ ಹೋಲುವಂತೆ ವಿಶೇಷವಾಗಿ ತಯಾರಿಸಬೇಕು. ಇದಕ್ಕೆ ‘ಮಾತ್ರೆ’ ಎನ್ನುವ ಪದದ ಬದಲಾಗಿ ‘ಚಾಕೊಲೆಟ್’ ಪದ ಸೇರಿಸಿ ಆಕರ್ಷಕ ಹೆಸರನ್ನು ಇಟ್ಟು ಮಕ್ಕಳಿಗೆ ನೀಡಬೇಕು. ಹೀಗೆ ಮಾಡುವುದರಿಂದ ಮಕ್ಕಳು ಕುತೂಹಲಭರಿತರಾಗಿ ಅದನ್ನು ಸೇವಿಸುತ್ತಾರೆ. ಈ ಮೂಲಕ ಜಂತುಹುಳು ನಿವಾರಣೆಯ ಗುರಿಯನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ.

–ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT