ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ಬಾರಿ ಅಧಿಕಾರದಲ್ಲಿದ್ದಾಗ ‘ಮಡಿಲು’ ಎಂಬ ಯೋಜನೆಯನ್ನು ಜಾರಿಗೆ ತಂದು, ತಾಯಿ– ಮಗುವಿನ ಆರೋಗ್ಯಕ್ಕೆ ವೈಜ್ಞಾನಿಕವಾಗಿ ಉಪಯೋಗವಾಗುವಂತಹ ಪರಿಕರಗಳ ಕಿಟ್ ಅನ್ನು ಬಡ ಬಾಣಂತಿಯರಿಗೆ ಉಚಿತವಾಗಿ ಕೊಡುತ್ತಿದ್ದರು.

ಬಾಣಂತಿ– ಮಕ್ಕಳ ಸಾವಿನ ಸಂಖ್ಯೆಯನ್ನು ಇಳಿಸುವಲ್ಲಿಯೂ ಇದು ಸಹಕಾರಿಯಾಗಿತ್ತು.
ಈಗ ಈ ಯೋಜನೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದಿಂದ ಬಾಣಂತಿ– ಮಕ್ಕಳಿಗೆ ಸ್ವಲ್ಪ ಧನಸಹಾಯ ದೊರೆಯುತ್ತದೆ.

ಆದರೆ ಅನೇಕ ವೇಳೆ ಮನೆಯವರೇ ಅದನ್ನು ಕಸಿದುಕೊಳ್ಳುತ್ತಾರೆ, ಇಲ್ಲವೇ ಬಾಣಂತಿಯರು ತಮ್ಮ ಹಾಗೂ ಮಗುವಿನ ಆರೋಗ್ಯವನ್ನು ಲೆಕ್ಕಿಸದೆ ಆ ಹಣದಲ್ಲಿ ಒಡವೆ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಸರ್ಕಾರ ಈ ನೆರವನ್ನು ಇನ್ನಷ್ಟು ವೈಜ್ಞಾನಿಕವಾಗಿ ರೂಪಿಸಿ, ಉಪಯೋಗಕ್ಕೆ ಬರುವ ವಸ್ತುಗಳನ್ನು ಕೊಟ್ಟು, ಯೋಜನೆ ಸದುಪಯೋಗ ಆಗುವಂತೆ ನೋಡಿಕೊಳ್ಳಲಿ. ಜೊತೆಗೆ ಮಡಿಲು ಯೋಜನೆ ಮತ್ತೆ ಮುಂದುವರಿಯಲಿ.

ನಳಿನಿ ಡಿ.,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.