ಹಳ್ಳಿಗಳಲ್ಲೂ ಅಕ್ರಮ ದಂಧೆ
ಅಕ್ರಮಗಳು ನಗರಗಳಲ್ಲಿಯೇ ನಡೆಯಬೇಕೆಂದಿಲ್ಲ, ಹಳ್ಳಿಗಳಲ್ಲಿಯೂ ಇದೀಗ ಯಥೇಚ್ಛವಾಗಿ ನಡೆಯುತ್ತಿವೆ. ಒಂದನೆಯದಾಗಿ, ಪೆಟ್ರೋಲ್ ಮತ್ತು ಡೀಸೆಲ್ ದಂಧೆ. ಪೆಟ್ರೋಲ್ ಬಂಕ್‌ನಲ್ಲಿ ₹ 102ಕ್ಕೆ ದೊರೆಯುವ ಲೀಟರ್ ಪೆಟ್ರೋಲ್, ಹಳ್ಳಿಗಳ ಡಬ್ಬಿ ಅಂಗಡಿ ಮತ್ತು ದೊಡ್ಡ ಕಿರಾಣಿ ಸ್ಟೋರ್‌ಗಳಲ್ಲಿ ₹ 120ರಿಂದ 130ಕ್ಕೆ ಮಾರಾಟವಾಗುತ್ತಿದೆ. ₹ 89ಕ್ಕೆ ದೊರೆಯುವ ಲೀಟರ್ ಡೀಸೆಲ್ ₹ 100ರಿಂದ 105ರ ತನಕ ಎಗ್ಗಿಲ್ಲದೇ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಅದೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳದೆ.
ಎರಡನೆಯದಾಗಿ, ಮದ್ಯ ದಂಧೆ. ನಗರದಲ್ಲಿ ₹ 150ರಿಂದ 170ಕ್ಕೆ ದೊರೆಯುವ ಬಿಯರ್, ಹಳ್ಳಿಗಳಲ್ಲಿ
₹ 220ರಿಂದ 250ಕ್ಕೆ ಮತ್ತು ಟೆಟ್ರಾ ಪ್ಯಾಕೆಟ್‌ನಲ್ಲಿ ₹ 55ರಿಂದ 60ಕ್ಕೆ ದೊರೆಯುವ ಮದ್ಯವು ಹಳ್ಳಿಗಳಲ್ಲಿ ₹ 80ರಿಂದ 100ರ ತನಕ ಮಾರಾಟವಾಗುತ್ತಿವೆ. ಇವೆಲ್ಲ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಗೆ ಗೊತ್ತಿಲ್ಲವೆಂದಲ್ಲ. ಎಲ್ಲರೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಅಷ್ಟೇ. ಆದಷ್ಟು ಬೇಗ ಹಳ್ಳಿಗಳು ಮೊದಲ ರೂಪಕ್ಕೆ ಬರಲಿ. ಹಳ್ಳಿಗಳಲ್ಲಿ ಇಂತಹವಕ್ಕೆಲ್ಲ ಜಾಗ ಇಲ್ಲದಂತಾಗಲಿ.
ಬಸನಗೌಡ ಪಾಟೀಲ, ಯರಗುಪ್ಪಿ, ಧಾರವಾಡ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.