ಮೈಸೂರಿನಿಂದ ಬಿಜಾಪುರದವರೆಗೆ...

ಬರಗೂರು ರಾಮಚಂದ್ರಪ್ಪನವರ ‘125! ಅಂಕಗಳಷ್ಟೇ ಅಲ್ಲ, ಹೋರಾಟ’
(ಪ್ರ.ವಾ., ಜುಲೈ 22) ಲೇಖನಕ್ಕೆ ಪೂರಕವಾಗಿ ಕೆಲವು ನೆನಪುಗಳು.

ಗೋಕಾಕ್ ಚಳವಳಿಗೆ ನಾಂದಿ ಹಾಡಿದ್ದು ಮೈಸೂರು ನಗರ. 1982ರ ಮಾರ್ಚ್ 15ರಿಂದ 21ರವರೆಗೆ ನಡೆದ ಚಳವಳಿಯ ಮೊದಲ ನೇತೃತ್ವವಹಿಸಿದ್ದು ಮೈಸೂರಿನಲ್ಲಿ ಸಕ್ರಿಯವಾಗಿದ್ದ ‘ಕನ್ನಡ ಮಾಧ್ಯಮ ಹೋರಾಟ ಸಮಿತಿ’. ಆ ಸಮಿತಿಯ ಮೂವರು ಸಂಚಾಲಕರಾಗಿದ್ದವರು ಸ.ರ. ಸುದರ್ಶನ, ನಾ. ಮಹಾವೀರ ಪ್ರಸಾದ್ ಮತ್ತು ನಾನು. ತಾತಯ್ಯ ಪ್ರತಿಮೆ ಇರುವ ಉದ್ಯಾನದಲ್ಲಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಅಂದಿನ ಪ್ರಾರಂಭಿಕ ಚಳವಳಿಯಲ್ಲಿ ಸಿನಿಮಾ ಕಲಾವಿದರಾದ ತೂಗುದೀಪ ಶ್ರೀನಿವಾಸ್, ವಿಷ್ಣುವರ್ಧನ್, ಎಂ.ಪಿ. ಶಂಕರ್ ಮತ್ತು ರಾಜಾನಂದ್ ಸ್ವಯಂಪ್ರೇರಣೆಯಿಂದ ಭಾಗವಹಿಸಿದ್ದರು.

ಪ್ರತಿಭಟನೆಯ ನಾಲ್ಕನೆಯ ದಿನ ಮಧ್ಯಾಹ್ನ 2 ಗಂಟೆಗೆ, ಪ್ರಾಧ್ಯಾಪಕರಾದ
ಎಂ. ಚಿದಾನಂದಮೂರ್ತಿಯವರು ಧರಣಿ ನಡೆಯುತ್ತಿದ್ದಲ್ಲಿಗೆ ಬಂದಿದ್ದರು.
ಪ್ರೊ. ದೇ. ಜವರೇಗೌಡರು ಆಗ ಅಮೆರಿಕದಲ್ಲಿದ್ದರು. ಹಾಗಾಗಿ, ಅವರು ಚಳವಳಿಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ಗೋಕಾಕ್ ಚಳವಳಿಗೆ ನಾಂದಿ ಹಾಡಿದ್ದು ಮೈಸೂರು ಎನ್ನುವುದನ್ನು ಮರೆಯಬಾರದು. ಆ ಬಳಿಕ, ರಾಜ್ಯದಾದ್ಯಂತ ಚಳವಳಿಯು ಬಿರುಸಿನಿಂದ ಮುಂದುವರಿಯಿತು. ಮಾರ್ಚ್ 15ರಂದು ಬಿಜಾಪುರದಲ್ಲಿ ಗಂಗಾಧರ ಕೊರವಳ್ಳಿ (ಕೊರಳ್ಳಿ) ಎಂಬುವವರು 58 ದಿನಗಳ ಉಪವಾಸ ನಡೆಸಿದರು. ಹಾಗಾಗಿ, ಮೈಸೂರು ಹಾಗೂ ಬಿಜಾಪುರವನ್ನು ಚಳವಳಿಯ ಎರಡು ಪ್ರಮುಖ ಬಿಂದುಗಳಾಗಿ ನೆನಪಿಸಿಕೊಳ್ಳಬೇಕು. ಕೊರವಳ್ಳಿಯವರ ಹೆಸರನ್ನು ಬಹಳಷ್ಟು ಬರಹಗಾರರು ಮಾಹಿತಿ ಇಲ್ಲದೆ ಕೈ ಬಿಟ್ಟಿದ್ದಾರೆ. ಚಳವಳಿಯಲ್ಲಿ ಹೃತ್ಪೂರ್ವಕವಾಗಿ ತೊಡಗಿಸಿಕೊಂಡಿದ್ದು ಈಗ ಇಲ್ಲದಿರುವವರನ್ನೂ ಸ್ಮರಿಸುವುದು ನಮ್ಮ ಕರ್ತವ್ಯ.

–ದೊರೆಸ್ವಾಮಿ, ಮೈಸೂರು

ಸಿದ್ದರಾಮಯ್ಯ ನಿರ್ದೋಷಿಯೇ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಕೈಗೊಂಡ ಕೆಲವು ಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ರಾಜಕೀಯ ಹೋರಾಟಕ್ಕಾಗಿ ನೀವು ಬಳಕೆ ಆಗುತ್ತಿರುವುದು ಏಕೆ ಎಂದು ಇ.ಡಿ.ಗೆ ಪ್ರಶ್ನಿಸಿದೆ (ಪ್ರ.ವಾ., ಜುಲೈ 22). ಆದರೆ, ಕಾಂಗ್ರೆಸ್ ವಲಯದಲ್ಲಿ ಸಿದ್ದರಾಮಯ್ಯ ಅವರು
ಈ ಪ್ರಕರಣದಲ್ಲಿ ನಿರ್ದೋಷಿಯಾಗಿದ್ದಾರೆ ಎಂಬಂತೆ ಸಂಭ್ರಮಿಸಲಾಗುತ್ತಿದೆ. ಅದು ನಿಜವೇ?

ಸುಪ್ರೀಂ ಕೋರ್ಟ್ ಸದರಿ ಪ್ರಕರಣದಲ್ಲಿ ಇ.ಡಿಯ ಮಧ್ಯಪ್ರವೇಶವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ತನ್ನ ಅಭಿಪ್ರಾಯ ನೀಡಿದೆಯೇ ಹೊರತು ಮುಡಾ ಹಗರಣವನ್ನು ಸಮಗ್ರವಾಗಿ ಅನುಲಕ್ಷಿಸಿ ಅಲ್ಲ.

–ಹೊಸಮನೆ ವೆಂಕಟೇಶ, ತಿ. ನರಸೀಪುರ

ಬೀದರ್–ಬೆಳಗಾವಿ ರೈಲು ಓಡಿಸಿ

ಬೀದರ್ ಹಾಗೂ ಬೆಳಗಾವಿ ನಗರಗಳ ನಡುವೆ ನಿತ್ಯವೂ ರಾತ್ರಿವೇಳೆ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಬೇಕಿದೆ. ಈ ರೈಲು ಬೀದರ್ನಿಂದ ಕಲಬುರಗಿ, ರಾಯಚೂರು, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಹುಬ್ಬಳ್ಳಿ ಮೂಲಕ ಬೆಳಗಾವಿ ತಲುಪಿದರೆ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು, ಈ ಬಗ್ಗೆ ಗಮನ ಹರಿಸುವರೇ?

–ಮುದ್ಗಲ್ ವೆಂಕಟೇಶ, ಕಲಬುರಗಿ

ಹೊಸ ಧ್ವನಿ ಕೇಳುವುದೇ?

‘ಕಾಲದ ಹೊಳೆಯಲ್ಲಿ ಉಳಿದ ರೇಡಿಯೊ’ ಲೇಖನವು (ಲೇ: ಜಿ.ಎಂ. ಶಿರಹಟ್ಟಿ, ಪ್ರ.ವಾ., ಜುಲೈ 23) ಚೆನ್ನಾಗಿದೆ. ‘ಆಕಾಶವಾಣಿ’ ಎಂದು ಖ್ಯಾತಿ ಪಡೆದಿರುವ ಈ ಸರ್ಕಾರಿಸ್ವಾಮ್ಯದ ಮಾಧ್ಯಮವು ಗ್ರಾಮೀಣ ಕೃಷಿ ವಲಯದಲ್ಲಿ ಅರಿವು, ಮನರಂಜನೆ ಮೂಲಕ ಸಾಕಷ್ಟು ಜನಾನುರಾಗಿಯಾಗಿದೆ.

ಆರು ದಶಕಗಳಿಂದ ರೇಡಿಯೊ ಆಲಿಸುತ್ತಾ ಬಂದಿರುವ ನನಗೆ ಇತ್ತೀಚೆಗೆ ಆಗಿರುವ ಬದಲಾವಣೆಗಳು ಬೇಸರ ತರಿಸುತ್ತಿವೆ. ಆಕಾಶವಾಣಿಯಲ್ಲಿ ನಿವೃತ್ತರಿಂದ ತೆರವಾದ ಹುದ್ದೆಗಳಿಗೆ ಹೊಸಬರ ನೇಮಕಾತಿ ನಡೆಯುತ್ತಿಲ್ಲ.

ಬಾನುಲಿಯ ಸಖ–ಸಖಿಯರು ಶ್ರಮವಹಿಸಿ ಕಾರ್ಯಕ್ರಮವನ್ನು ನಿಭಾಯಿಸುತ್ತಿರುವರಾದರೂ, ಕೇಳುಗರಿಗೆ ಏಕತಾನತೆಯ ಅನುಭವ ಆಗುತ್ತಿದೆ. ಹೊಸ ಧ್ವನಿಗಳು ಹರಿದು ಬರುವಂತಾಗಲಿ. ಇಲ್ಲವಾದರೆ ಕಾಲದ ಹೊಳೆಯಲ್ಲಿ ರೇಡಿಯೊ ಮುಳುಗಬಹುದು.

–ಅನಿಲಕುಮಾರ ಮುಗಳಿ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.