ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ಇನ್ನಷ್ಟು ಬಿಗಿಯಾಗಲಿ

Last Updated 18 ಜುಲೈ 2019, 19:45 IST
ಅಕ್ಷರ ಗಾತ್ರ

ಶಾಸಕ ಸ್ಥಾನಕ್ಕೆ ಸ್ವಾರ್ಥ ಪ್ರಯೋಜನಗಳಿಗಾಗಿ ರಾಜೀನಾಮೆ ನೀಡಿ ಉಪಚುನಾವಣೆಗಳನ್ನು ಜನರ ಮೇಲೆ ಹೇರುವುದು ಅಕ್ಷಮ್ಯ. ನಮ್ಮ ಬಹುಪಾಲು ಚುನಾಯಿತ ಪ್ರತಿನಿಧಿಗಳು ಒಂದು ಪಕ್ಷದ ಬಿ ಫಾರಂ ಪಡೆದು ಸ್ಪರ್ಧಿಸಿ, ಗೆದ್ದು ಬಂದಿರುತ್ತಾರೆ. ಅವರು ಆ ಪಕ್ಷಕ್ಕೆ ಮತ್ತು ಮತದಾರರಿಗೆ ಜವಾಬ್ದಾರಿಯಾಗಿರುತ್ತಾರೆ. ಅವಧಿಗೂ ಮೊದಲೇ ಮತದಾರರ ಮನ್ನಣೆಯನ್ನು ಧಿಕ್ಕರಿಸಿ, ಪಕ್ಷಕ್ಕೆ ದ್ರೋಹ ಮಾಡುವುದು ಎಷ್ಟು ಸರಿ?

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನೂ ಬಿಗಿಯಾಗಿಸಬೇಕಾಗಿದೆ. ಒಂದು ಪಕ್ಷದ ಬಿ ಫಾರಂ ಪಡೆದು ಆಯ್ಕೆಯಾಗುವ ಶಾಸಕ, ಕೊನೇಪಕ್ಷ ಆ ಅವಧಿ ಪೂರ್ಣಗೊಳ್ಳುವವರೆಗಾದರೂ ಅದೇ ಪಕ್ಷದಲ್ಲಿ ಇರಬೇಕು. ರಾಜೀನಾಮೆ ನೀಡಲೇಬೇಕಾದ ಸ್ಥಿತಿ ಇದ್ದರೆ, ಅದಕ್ಕೆ ಅವಕಾಶ ನೀಡಬಹುದಾದರೂ ಬೇರೆ ಪಕ್ಷಕ್ಕೆ ಸೇರಲು ಅವಕಾಶ ಇರಬಾರದು. ಇಂತಹ ಮೂಗುದಾರ ಹಾಕದೇ ಇದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ.

-ವಿ.ಎನ್‌. ಶ್ರೀನಿವಾಸಮೂರ್ತಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT