ಪೋಪ್ ಬಗ್ಗೆ ಹಗುರ ಮಾತು ಸಲ್ಲ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಟೀಕಿಸುವ ಭರದಲ್ಲಿ ಶಾಸಕ
ವಿ. ಸುನಿಲ್ ಕುಮಾರ್ ಅವರು, ‘ಸಿದ್ದರಾಮಯ್ಯನವರು ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ’ ಎಂದು ಹೇಳಿದ್ದಾರೆ (ಪ್ರ.ವಾ., ಸೆ. 19). ಪೋಪ್ ಆಯ್ಕೆ ಹೇಗೆ ನಡೆಯುತ್ತದೆ ಎಂಬ ಕನಿಷ್ಠ ಮಾಹಿತಿಯೂ ಶಾಸಕರಿಗೆ ಇದ್ದಂತಿಲ್ಲ. ಸಮುದಾಯವೊಂದರ ಅತ್ಯುನ್ನತ ಪವಿತ್ರ ಸ್ಥಾನದ ಬಗ್ಗೆ ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ರಾಜಕೀಯ ನಿಲುವು, ಭಿನ್ನಮತವನ್ನು ಸೌಜನ್ಯ ಹಾಗೂ ಸಂವಾದದ ಚೌಕಟ್ಟಿನಲ್ಲಿಯೇ ವ್ಯಕ್ತಪಡಿಸುವುದು ಅತ್ಯಂತ ಸಮಂಜಸ.

– ಪ್ರಶಾಂತ್ ಇಗ್ನೇಷಿಯಸ್, ಬೆಂಗಳೂರು

ಕಲ್ಯಾಣ: ಸಾಕಾರವಾಗುವುದು ಯಾವಾಗ?

ಪ್ರತಿವರ್ಷ ಸೆಪ್ಟೆಂಬರ್ 17 ಬಂದಾಗ ‘ಕಲ್ಯಾಣ ಕರ್ನಾಟಕ ಉತ್ಸವ’ ನೆನಪಾಗುತ್ತದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ಮಾತನಾಡಲು ಅಥವಾ ನೆನಪಿಸಿಕೊಳ್ಳಲು ವರ್ಷದಲ್ಲಿ ಒಂದೇ ದಿನ ಅನ್ನುವಂತಾಗಿದೆ. ‘ಕಲ್ಯಾಣ’ ಎನ್ನುವುದು ಕೇವಲ ಹೆಸರಿನಲ್ಲಿದೆಯೇ ವಿನಾ ಯಾವುದೇ ಅಭಿವೃದ್ಧಿಯಲ್ಲಿಲ್ಲ. ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಕೊಪ್ಪಳ ಜಿಲ್ಲೆಗಳ ಜನರು ಉದ್ಯೋಗ ಅರಸಿ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ.

ಶಿಕ್ಷಕರ ಕೊರತೆಯಿಂದಾಗಿ ಎಸ್ಎಸ್ಎಲ್ಸಿ ಮತ್ತು ಪಿಯು ಫಲಿತಾಂಶ ಕುಸಿಯುತ್ತಿದೆ. ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿ ಗುಣಮಟ್ಟದ ಶಿಕ್ಷಣ ದೊರೆತಾಗಷ್ಟೇ ಹೆಸರಿಗೆ ತಕ್ಕಂತೆ ಕಲ್ಯಾಣವಾಗುತ್ತದೆ.

– ಭಾಗ್ಯ ಎಸ್. ಬುಳ್ಳಾ, ಕಲಬುರಗಿ

ಮುಖ್ಯಮಂತ್ರಿಗಳೇ, ಮಾತು ಉಳಿಸಿಕೊಳ್ಳಿ

ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ತುಂಬುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಕಳೆದ ಮೂರು ವರ್ಷಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಖಾಲಿಯಾಗಿದ್ದು, ಖಾಲಿ ಹುದ್ದೆಗಳ ಸಂಖ್ಯೆ 2.84 ಲಕ್ಷಕ್ಕೇರಿದೆ. ಸದ್ಯ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮಸ್ಯೆಯೂ ಬಗೆಹರಿದಿದೆ. ಈ ಬಗೆಗಿನ ಕಾನೂನು ತೊಡಕು ನಿವಾರಿಸಿ ತ್ವರಿತವಾಗಿ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕಿದೆ.

– ವಿಕಾಸಕುಮಾರ್ ಬಲಶೆಟ್ಟಿಹಾಳ, ಯಾದಗಿರಿ

ಬದುಕಿದ್ದಾಗಲೇ ಗೌರವಿಸೋಣ

ಚಿತ್ರನಟರಾದ ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿರುವುದು ಸರಿಯಷ್ಟೆ. ವ್ಯಕ್ತಿಯೊಬ್ಬ ತನ್ನ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ, ತ್ಯಾಗ ಮತ್ತು ನಿಷ್ಠೆಯಿಂದ ಸಾಧನೆ ಮಾಡಿದಾಗ ಸಮಾಜದಿಂದ ಗುರುತಿಸುವಿಕೆ ಮತ್ತು ಗೌರವ ದೊರಕಬೇಕು. ಆದರೆ, ಬಹುತೇಕ ವೇಳೆ ಸಾಧಕರಿಗೆ ಅವರ ಜೀವಿತಾವಧಿಯಲ್ಲಿ ಸೂಕ್ತ ಗೌರವ ಸಿಗುವುದಿಲ್ಲ. ಬದುಕಿರುವಾಗಲೇ ಅವರಿಗೆ ಗೌರವ – ಪುರಸ್ಕಾರ ದೊರೆತರೆ, ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಇನ್ನಷ್ಟು ಉತ್ತಮ ಕಾರ್ಯ ಮಾಡಲು ಅವರಿಗೆ ಪ್ರೇರಣೆ ದೊರಕುತ್ತದೆ.

ಪ್ರಶಸ್ತಿ ಎನ್ನುವುದು ಕೇವಲ ಸಂಕೇತವಲ್ಲ, ಅದು ವ್ಯಕ್ತಿಯ ಜೀವನದ ಸಾಧನೆಗೆ ದೊರೆಯುವ ಮನ್ನಣೆ. ಸಮಾಜದಲ್ಲಿ ವಿಜ್ಞಾನ, ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ ಮುಂತಾದ ಕ್ಷೇತ್ರಗಳಿಗೆ ಅಸಾಧಾರಣ ಕೊಡುಗೆ ನೀಡಿದವರಿದ್ದಾರೆ. ಬದುಕಿರುವಾಗಲೇ ಅವರ ಸೇವೆ ಗುರುತಿಸಿ ಪ್ರಶಸ್ತಿ, ಪುರಸ್ಕಾರ ನೀಡುವ ಪರಿಪಾಟಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕಿದೆ.

– ಮಂಜುನಾಥ ಜಿ. ಪಾಲವ್ವನಹಳ್ಳಿ, ಚಿತ್ರದುರ್ಗ

ಕಣ್ಣೀರು ಸುರಿಸುತ್ತಿರುವ ನದಿಗಳು!

ಕೈಗಾರಿಕೆಗಳ ತ್ಯಾಜ್ಯ ಸೇರ್ಪಡೆಯಾಗುವುದರಿಂದ ಕರ್ನಾಟಕದ 12 ನದಿಗಳು ಮಲಿನವಾಗಿವೆ. ಈ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲಶಕ್ತಿ ಸಚಿವಾಲಯಕ್ಕೆ ವರದಿಯನ್ನೂ ನೀಡಿದೆ. ಆದರೆ, ಈ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳದಿರುವ ಕಾರಣದಿಂದಾಗಿ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವುದು ಪರಿಸರಪ್ರಿಯರಿಗೆ ಖುಷಿ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ನದಿಗಳ ನೀರು ಮಲಿನವಾಗದಂತೆ ತಡೆಯುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.

– ಪ್ರೊ. ಬಸಪ್ಪ ಯ. ಬಂಗಾರಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.