ಭಾನುವಾರ, ಆಗಸ್ಟ್ 14, 2022
20 °C

ಅರಳುವ ಮೇಧಾವಿಗಳನ್ನು ಗುರುತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಸರ್ಕಾರವು ನಾಡಿನ ಮೂವರು ಸಾಧಕರಿಗೆ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿರುವುದು ಬಹು ಸಂತೋಷ. ಇವರ ಸಾಧನೆ ದೊಡ್ಡದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಎಲೆ ಮರೆಯ ಕಾಯಿಯ ಹಾಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಅನನ್ಯ ಸೇವೆ ಸಲ್ಲಿಸುತ್ತಿರುವವರು ಅಸಂಖ್ಯ. ಅವರು ಅಜ್ಞಾತ ಪ್ರತಿಭಾಶಾಲಿಗಳಾಗಿಯೇ ಉಳಿಯಬಾರದು.

ಹೊನ್ನನ್ನು ಪದೇ ಪದೇ ಹೊಗಳಿ ಮತ್ತೆ ಮತ್ತೆ ಅದಕ್ಕೆ ಹೊಳಪು ನೀಡುವ ಅಗತ್ಯವಿಲ್ಲ. ತಲಾ ಐದು ಲಕ್ಷ ರೂಪಾಯಿಗಳ ಮೂರು ಭಾರಿ ಮೊತ್ತದ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಬದಲು ಸರ್ಕಾರವು ಹತ್ತಾರು ಮಂದಿ ಅರಳುವ ಮೇಧಾವಿಗಳನ್ನು ಗುರುತಿಸಿ, ಅವರಿಗೆ ತಲಾ ₹ 25,000 ನಗದು ಬಹುಮಾನವುಳ್ಳ ಪ್ರಶಸ್ತಿಯಿತ್ತು ಅವರ ಬೆನ್ನು ತಟ್ಟುವುದು ಅತ್ಯಂತ ಸಮಂಜಸವಾದೀತು.

-ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.