ಸೋಮವಾರ, ಜುಲೈ 4, 2022
25 °C

ವಾಚಕರ ವಾಣಿ| ಸೌರವಿದ್ಯುತ್‌: ಬೇಕು ಇನ್ನಷ್ಟು ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರದಲ್ಲಿ ಕಲ್ಲಿದ್ದಲು ಬಳಸಿ ವಿದ್ಯುತ್‌ ಉತ್ಪಾದಿಸುವ ವಿದ್ಯುತ್ ಘಟಕಗಳು ಹಾಗೂ ವಾಹನಗಳ ಚಾಲನೆಗೆ ಬಳಸುವ ಪೆಟ್ರೋಲ್, ಡೀಸೆಲ್‌ನಿಂದಾಗಿ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್‌ನಿಂದ ಪರಿಸರದಲ್ಲಿ ವಾಯುಮಾಲಿನ್ಯ ಹೆಚ್ಚಳವಾದ ಅಂಶ ಜಗಜ್ಜಾಹೀರಾಗಿದೆ. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದ, ಸರ್ವ ಋತುಗಳಲ್ಲೂ ಉಚಿತವಾಗಿ ದೊರೆಯುವ ಸೌರಶಕ್ತಿಯ ಸದ್ಬಳಕೆ ಮಾಡಿಕೊಂಡು, ಸೌರವಿದ್ಯುತ್ ಉತ್ಪಾದನೆಗೆ ಇನ್ನಷ್ಟು ಹೆಚ್ಚು ಒತ್ತು ನೀಡಬೇಕಾಗಿದೆ. ವಿದ್ಯುತ್‌ಚಾಲಿತ ಬಸ್‌ಗಳಿಗಾಗಿ ಬಸ್ ಡಿಪೊ, ಬಸ್ ನಿಲ್ದಾಣಗಳ ಚಾವಣಿಗಳು, ಇತರ ಸರ್ಕಾರಿ ಕಟ್ಟಡಗಳು, ಖಾಸಗಿ ಒಡೆತನದ ಕಟ್ಟಡಗಳ ಮೇಲೆ ಸೌರವಿದ್ಯುತ್ ಫಲಕಗಳನ್ನು ಅಳವಡಿಸಿ, ಕನಿಷ್ಠ ದರದಲ್ಲಿ ಸೌರವಿದ್ಯುತ್ ಅನ್ನು ವಾಹನಗಳಿಗೆ ಒದಗಿಸುವುದು ಸೂಕ್ತ ಮತ್ತು ಸಮಯೋಚಿತ
ಕ್ರಮವಾಗುತ್ತದೆ.

ಈ ಕುರಿತು ಪರಿಸರ ತಜ್ಞರು, ಪರಿಸರಪ್ರೇಮಿಗಳು, ಸಂಘಟನೆಗಳು ಸಕಾರಾತ್ಮಕವಾಗಿ ಚಿಂತನೆ ಮಾಡಿ, ಸೌರ ವಿದ್ಯುತ್ ಅನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲು ಸರ್ಕಾರದ ಮನವೊಲಿಸಲು ಮುಂದಾಗಬೇಕು.

- ಬಸವರಾಜ ಹುಡೇದಗಡ್ಡಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು