ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ| ಡೈಲಾಗ್‌ ಹೊಡೆದರಷ್ಟೇ ಸಾಲದು

Last Updated 18 ಜುಲೈ 2021, 19:30 IST
ಅಕ್ಷರ ಗಾತ್ರ

ಕಥೆ, ಚಿತ್ರಕಥೆ, ನಟನೆ ಹಾಗೂ ಮೇರು ತಂತ್ರಜ್ಞಾನದಿಂದ ಪ್ರಖ್ಯಾತಿ ಪಡೆಯಬೇಕಾದ ಕನ್ನಡ ಚಿತ್ರರಂಗ ಇಂದು ಕೆಲವರ ವೈಯಕ್ತಿಕ ಬದುಕಿನ ಆರೋಪ ಪ್ರತ್ಯಾರೋಪಗಳಿಂದ ಜರ್ಜರಿತವಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿನಿಮಾಗಳಲ್ಲಿ ವೀಕ್ಷಕರಿಗೆ ತಾಳ್ಮೆ, ಸಂಯಮ ಹಾಗೂ ನೀತಿ ಪಾಠದ ಉದ್ದುದ್ದ ಡೈಲಾಗ್ ಹೊಡೆಯುವ ಇದೇ ಕೆಲವು ನಟ ಹಾಗೂ ನಿರ್ದೇಶಕರು, ನಿಜ ಜೀವನದಲ್ಲಿ ಅವೆಲ್ಲವನ್ನೂ ಗಾಳಿಗೆ ತೂರಿ ಬಹಿರಂಗವಾಗಿಯೇ ಮಾಧ್ಯಮ ಗಳೆದುರು ಅಸಂಬದ್ಧ ಪದಗಳನ್ನು ಬಳಸುವುದು ಅಸಹ್ಯಕರ ಬೆಳವಣಿಗೆ.

ಸಾರ್ವಜನಿಕ ರಂಗದಲ್ಲಿರುವ ನಟ-ನಿರ್ದೇಶಕರು ತಮ್ಮ ವೈಯಕ್ತಿಕ ಬದುಕಿನಲ್ಲೂ ಉತ್ತಮ ನಡವಳಿಕೆ ಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಅವರನ್ನೇ ಅನುಸರಿಸುವ ಸಾವಿರಾರು ಅಭಿಮಾನಿಗಳಿರು ತ್ತಾರೆ. ಅವರೆಲ್ಲರಿಗೂ ಇವರು ವ್ಯಕ್ತಿತ್ವದಿಂದ ಆದರ್ಶಪ್ರಾಯರಾಗಿರಬೇಕೇ ಹೊರತು, ಕೆಟ್ಟ ಪದಪುಂಜಗಳ ಸಂಬೋಧನೆಯಿಂದಲ್ಲ.

ಹರಳಹಳ್ಳಿ ಪುಟ್ಟರಾಜು,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT