ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಜೊತೆ ಪೈಪೋಟಿಗೆ ಇಳಿಯೋಣ!

ಅಕ್ಷರ ಗಾತ್ರ

ಬರಲಿದೆ ಮರಗಳ ಸುನಾಮಿ! (ಸಂಗತ, ಜುಲೈ 26). ಇದೇನು ಅನಾಹುತ ತರುವ ಸುನಾಮಿಯಲ್ಲ! ನೆರೆಯ ಪಾಕಿಸ್ತಾನವು ಪರಿಸರ ದಿನಾಚರಣೆಯ ಈ ಸಾಲಿನ ಆತಿಥೇಯ ದೇಶವಾಗಿದೆ. ಜೀವಪರಿಸರ ಪುನರ್‌ಸ್ಥಾಪನೆ ಅನುಸಾರ ಆ ದೇಶವು ಮುಂದಿನ ಐದು ವರ್ಷಗಳಲ್ಲಿ ತನ್ನ ನೆಲದಲ್ಲಿ ಸಾವಿರ ಕೋಟಿ ಸಸಿ ನೆಟ್ಟು ಮರಗಳ ಸುನಾಮಿಯನ್ನೇ ಸೃಷ್ಟಿಸಲಿದೆ.

ಭಾರತ– ಪಾಕಿಸ್ತಾನದ ಮಧ್ಯೆ ಬರಿಯ ಕಲಹ, ಸಂಘರ್ಷಗಳನ್ನೇ ಕೇಳುತ್ತಿದ್ದ ನಮಗೆ ಈ ಸುದ್ದಿ ನಿಜಕ್ಕೂ ಸಂತಸ ಮೂಡಿಸಿತು. ನಮ್ಮ ದೇಶವೂ ಈ ವಿಷಯದಲ್ಲಿ ಪಾಕಿಸ್ತಾನದ ಜೊತೆ ಪೈಪೋಟಿ ನಡೆಸಲಿ! ನಾವೂ ಅವರಿಗಿಂತ ಹೆಚ್ಚು ಮರಗಳನ್ನು ಬೆಳೆಸಿ ಬೀಗೋಣ. ಯಾರೇ ಮರಗಳನ್ನು ಬೆಳೆಸಿದ್ದು ಹೆಚ್ಚು ಕಡಿಮೆ ಎಂದು ಹೇಳಿದರೂ ಖಂಡಿತ ಯಾರಿಗೂ ನಷ್ಟವಿಲ್ಲ ತಾನೇ?! ನೆರೆ ದೇಶದೊಡನೆ ಇಂತಹ ಆರೋಗ್ಯಕರ ಪೈಪೋಟಿ ನಡೆಯಲಿ, ಇಬ್ಬರಿಗೂ ಕ್ಷೇಮ.

- ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT