ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬೆಡ್‌ ಬ್ಲಾಕಿಂಗ್‌: ನಿಷ್ಪಕ್ಷಪಾತ ತನಿಖೆ ಅಗತ್ಯ

Last Updated 5 ಮೇ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಎರಡನೇ ಅಲೆಯ ಹೊಡೆತದಿಂದ ಇಡೀ ರಾಜ್ಯ ತಲ್ಲಣಗೊಂಡಿರುವ ಹೊತ್ತಿನಲ್ಲಿ ಮಂಗಳವಾರ ಮಧ್ಯಾಹ್ನ ಮಾಧ್ಯಮಗಳು ಬಿತ್ತರಿಸಿದ ಸುದ್ದಿ ಅತ್ಯಂತ ಆಘಾತಕಾರಿಯಾಗಿತ್ತು. ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ತಂಡ ‘ಬೆಡ್ ಬ್ಲಾಕಿಂಗ್‌’ನಂತಹ ಭ್ರಷ್ಟಾಚಾರದ ಕರಾಳ ಮುಖವನ್ನು ಬಯಲಿಗೆ ತಂದಿದೆ. ಬೆಂಗಳೂರಿನಲ್ಲಿ ಹೆಚ್ಚಿನ ಮನೆಗಳು ಸೋಂಕಿತರಿಂದ, ಸಾವು– ನೋವಿನಿಂದ ತುಂಬಿರುವ ಹೊತ್ತಿನಲ್ಲಿ ಬಿಬಿಎಂಪಿ ಸಿಬ್ಬಂದಿ ‘ಉರಿಯುತ್ತಿರುವ ಮನೆಯ ಗಳ ಹಿರಿಯುವ ಕೆಲಸ’ ಮಾಡಿರುವುದು ಅತ್ಯಂತ ಅಮಾನವೀಯ.

ಸರ್ಕಾರ ಇನ್ನಾದರೂ ತನ್ನ ಹೊಣೆ ಅರಿತುನಿಷ್ಪಕ್ಷಪಾತವಾದ ತನಿಖೆ ನಡೆಸಲಿ. ಈ ಕೃತ್ಯದಲ್ಲಿ ಶಾಮೀಲಾದ ಎಲ್ಲರನ್ನೂ ಶಿಕ್ಷಿಸಲಿ. ಬೆಂಗಳೂರಿನಲ್ಲಿ ಆಕ್ಸಿಜನ್‌ ಸೌಲಭ್ಯವಿರುವ ಹಾಸಿಗೆ ಸಿಗದೆ ಸತ್ತವರ ಆತ್ಮಕ್ಕೆ ಆ ಮೂಲಕವಾದರೂ ನ್ಯಾಯ ಸಿಗುವಂತಾಗಲಿ.

ಡಾ. ಅರ್ಚನಾ ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT