ಬುಧವಾರ, ಜೂನ್ 16, 2021
23 °C

ವಾಚಕರ ವಾಣಿ: ಅಂಬೇಡ್ಕರ್ ಮಾತು ಇಂದಿಗೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಾವು ಕಟ್ಟಬೇಕಾಗಿರುವುದು ಶಾಲೆ-ಕಾಲೇಜು, ಆಸ್ಪತ್ರೆಗಳನ್ನೇ ಹೊರತು ದೇವಾಲಯ, ಚರ್ಚು, ಮಸೀದಿ
ಗಳನ್ನಲ್ಲ’ ಎಂಬ ಡಾ. ಬಿ.ಆರ್.ಅಂಬೇಡ್ಕರ್‌ ಅವರ ಮಾತು ತುಂಬಾ ಅರ್ಥಗರ್ಭಿತವಾದದ್ದು. ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ಕೋವಿಡ್‌ ರೋಗಿಗಳು ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಪ್ರಾಣ ಬಿಡುತ್ತಿರುವುದನ್ನು ನೋಡಿದರೆ, ಈ ಮಾತು ಈಗಲೂ ಎಷ್ಟು ಪ್ರಸ್ತುತ ಮತ್ತು ಮಹತ್ವದ್ದಾಗಿದೆ ಎಂಬುದು ತಿಳಿಯುತ್ತದೆ.

ಏಕೆಂದರೆ ಇಂದಿಗೂ ನಮ್ಮ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಜಾತಿ-ಧರ್ಮಗಳ ಬೆನ್ನು ಹತ್ತಿ, ಕೋಟಿ ಕೋಟಿ ಹಣ ಖರ್ಚು ಮಾಡಿ ದೇವಾಲಯ, ಮಂದಿರ, ಚರ್ಚು, ಮಸೀದಿಗಳನ್ನೇ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಸುಸಜ್ಜಿತ ಶಾಲೆ-ಕಾಲೇಜು, ಆಸ್ಪತ್ರೆಗಳ ಕೊರತೆ ಕಂಡುಬರುತ್ತಿದೆ. ಇದು ನಮ್ಮ ದೇಶದ ಇಂದಿನ ದುಃಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಈಗಲಾದರೂ ನಮ್ಮ ಸರ್ಕಾರ ಮತ್ತು ರಾಜಕಾರಣಿಗಳು ಅಂಬೇಡ್ಕರ್‌ ಅವರ ಈ ಮಾತನ್ನು ಗಂಭೀರವಾಗಿ ಪರಿಗಣಿಸಿ, ಜನಸಂಖ್ಯೆಗೆ ಅನುಗುಣವಾಗಿ ವೈದ್ಯಕೀಯ ಮತ್ತು ಶಾಲಾ ಕಾಲೇಜು ಸೌಲಭ್ಯ ಒದಗಿಸಬೇಕು.

ಸದಾಶಿವ ಎಂ. ಮುರಗೋಡ, ರಾಮದುರ್ಗ, ಬೆಳಗಾವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು