ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧೇಶ್ವರ ಶ್ರೀಗಳು ಕಟ್ಟಿದ ಗ್ರಂಥಾಲಯ

Last Updated 3 ಜನವರಿ 2023, 19:45 IST
ಅಕ್ಷರ ಗಾತ್ರ

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಗುಡಿ ಕಟ್ಟಿಲ್ಲ, ಮಠ ಕಟ್ಟಿಲ್ಲ, ಪೀಠ ಸ್ಥಾಪಿಸಿ ಜಗದ್ಗುರುವಾಗಿ ಪಟ್ಟ ಕಟ್ಟಿಕೊಳ್ಳಲಿಲ್ಲ. ಆದರೆ ಅವರು ಒಂದು ಸುಂದರವಾದ, ಭವ್ಯವಾದ ಗ್ರಂಥಾಲಯ ಕಟ್ಟಿದ್ದಾರೆ. ಅಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಯ ಸುಮಾರು ಹದಿನೈದು ಸಾವಿರ ಗ್ರಂಥಗಳಿವೆ. ಇವು ಜಗತ್ತಿನ ಶ್ರೇಷ್ಠ ಚಿಂತಕರು, ತತ್ವಜ್ಞಾನಿಗಳು, ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ನೊಬೆಲ್ ಪ್ರಶಸ್ತಿ ಪುರಸ್ಕೃತರು ಬರೆದ ಅತ್ಯಂತ ಮಹತ್ವದ ಪುಸ್ತಕಗಳಾಗಿವೆ.

ದೇಶ–ವಿದೇಶಗಳ ಗಣ್ಯರು ತಮ್ಮ ಗ್ರಂಥಗಳನ್ನು ಶ್ರೀಗಳಿಗೆ ಕಳಿಸುತ್ತಿದ್ದರು. ಶ್ರೀಗಳು ಕೂಡ ತಮಗೆ ಇಷ್ಟವಾದ ಕೃತಿಗಳನ್ನು ತರಿಸಿಕೊಳ್ಳುತ್ತಿದ್ದರು. ಐದು ದಶಕಗಳ ಅವಧಿಯಲ್ಲಿ ಬಂದ ಪುಸ್ತಕಗಳನ್ನೆಲ್ಲ ಶ್ರೀಗಳು ವ್ಯವಸ್ಥಿತವಾಗಿ ವಾಚನಾಲಯದಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಸಾರ್ವಜನಿಕರು ಈ ಗ್ರಂಥಾಲಯದ ಪ್ರಯೋಜನ ಪಡೆಯಲು ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಪುಸ್ತಕವನ್ನು ಪ್ರೀತಿಸುವವರು ಮನುಷ್ಯರನ್ನು ಪ್ರೀತಿಸುತ್ತಾರೆ ಎನ್ನುವ ಮಾತೊಂದು ಇದೆ. ಸಿದ್ಧೇಶ್ವರ ಶ್ರೀಗಳು ಇದಕ್ಕೆ ರೂಪಕದಂತಿದ್ದರು. ನಿತ್ಯ ನಾಲ್ಕು– ಐದು ಗಂಟೆ ಅಧ್ಯಯನ ಮಾಡುತ್ತಿದ್ದರು. ಧಾರ್ಮಿಕ ವಿಚಾರ ಅಷ್ಟೇ ಅಲ್ಲ, ಕಲೆ, ವಿಜ್ಞಾನ, ತತ್ವಶಾಸ್ತ್ರ, ಕೃಷಿ, ಸಮಾಜಸೇವೆ... ಹೀಗೆ ಬೇರೆ ಬೇರೆ ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದರು. ತಮಗೆ ಸ್ಪಷ್ಟವಾಗದ ಯಾವ ವಿಚಾರವನ್ನೂ ಅವರು ಮಾತನಾಡುತ್ತಿರಲಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿದ್ದರು. ಅವರು ಇಂಗ್ಲಿಷ್‌ನಲ್ಲಿ ರಚಿಸಿದ ‘ಸಾಂಗ್ಸ್ ಆಫ್ ಸೈಲೆನ್ಸ್’ ಕವನ ಸಂಕಲನ ಬಹಳ ಪ್ರಸಿದ್ಧಿ ಪಡೆದಿದೆ.

-ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT