ಬುಧವಾರ, ಅಕ್ಟೋಬರ್ 16, 2019
22 °C

ದಸರಾ: ಎಚ್ಚರ ಅಗತ್ಯ

Published:
Updated:

ದಸರಾ ಮಹೋತ್ಸವವು ಚಾಮುಂಡೇಶ್ವರಿಯ ಅನುಗ್ರಹದಿಂದ ಚೆನ್ನಾಗಿ ಜರುಗಿತು. ಆದರೆ, ಚಿನ್ನದ ಅಂಬಾರಿ ಹೊತ್ತ ಅರ್ಜುನನ ಛಾಯಾಚಿತ್ರ ತೆಗೆದುಕೊಳ್ಳಲು ಜನ ಮುಗಿಬಿದ್ದದ್ದರಿಂದ, ಅರ್ಜುನ ಹಾಗೂ ಆತನ ಮಾವುತನಿಗೆ ಇದರಿಂದ ತೊಂದರೆಯಾಯಿತು. ಲಕ್ಷಾಂತರ ಜನ ಸೇರುವಲ್ಲಿ ಮೂಕಪ್ರಾಣಿಗಳಿಗೆ ತೊಂದರೆಯಾಗದಂತೆ ಸಾರ್ವಜನಿಕರು ನಡೆದುಕೊಳ್ಳಬೇಕು.

ಫೋಟೊ ಫ್ಲ್ಯಾಷ್‌ನಿಂದ ಗಾಬರಿಗೊಂಡ ಅರ್ಜುನ, ದೇಹವನ್ನು ಅಲುಗಾಡಿಸುತ್ತಿತ್ತು. ಪ್ರಾಣಿಗಳ ಗುಣ ಸ್ವಭಾವ ಅರಿಯದ ಸಾರ್ವಜನಿಕರು ಫೋಟೊ ತೆಗೆಯಲು ಮುಂದಾಗುತ್ತಲೇ ಇದ್ದರು. ಈ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿಯೇ ಸೂಚನೆ ನೀಡಬೇಕಾದ ಅಗತ್ಯವಿತ್ತು.

ಗಜಪಡೆಯು ಫೋಟೊ ಫ್ಲ್ಯಾಷ್‌ನಿಂದ ಬೆದರಿ ಒಂದು ವೇಳೆ ದಿಕ್ಕಾಪಾಲಾಗಿ ಓಡಿದ್ದಿದ್ದರೆ ಅನಾಹುತ ಆಗುತ್ತಿತ್ತು. ಮೆರವಣಿಗೆ ವೇಳೆ ಆನೆಗಳ ಫೋಟೊ ತೆಗೆಯುವುದನ್ನು ನಿರ್ಬಂಧಿಸಿ.

–ಎಂ.ಎಸ್.ಉಷಾ ಪ್ರಕಾಶ, ಮೈಸೂರು

Post Comments (+)