ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ನೀತಿಯು ಇಡೀ ಶಿಕ್ಷಣ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಲಿದೆ. ವಿವಿಧ ವಲಯದವರು ಇದನ್ನು ಆಳವಾಗಿ ಅಧ್ಯಯನ ಮಾಡಿ, ಅನುಷ್ಠಾನದಲ್ಲಿ ಭಾಗವಹಿಸಬೇಕಾಗಿದೆ. ಆದರೆ ದುರಂತವೆಂದರೆ, ಸರ್ಕಾರವು ಈ ನೀತಿಯ ವಿವರಗಳನ್ನು ಬರೀ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆ ಮಾಡಿ ಕೈತೊಳೆದುಕೊಂಡಿದೆ. ಇದರ ಕರಡು ಪ್ರತಿಯನ್ನೂ ಇದೇ ರೀತಿ ಇಂಗ್ಲಿಷ್ನಲ್ಲಷ್ಟೇ ಹೊರಡಿಸಲಾಗಿತ್ತು.

ಕರ್ನಾಟಕದಲ್ಲಿ ಈ ನೀತಿಯ ಬಗ್ಗೆ ಆಳವಾದ ಚರ್ಚೆ ಆಗಬೇಕು ಎಂದರೆ, ಇಂಥ ಮಹತ್ವದ ದಾಖಲೆಯ ಪೂರ್ಣಪಾಠ ಕನ್ನಡದಲ್ಲಿ ಲಭ್ಯವಾಗುವುದು ಬೇಡವೇ? ಕೇಂದ್ರ ಸರ್ಕಾರದ ಇಂಥ ಎಲ್ಲಾ ಮಹತ್ವದ ದಾಖಲೆಗಳನ್ನೂ ಕನ್ನಡ ಭಾಷೆಯಲ್ಲಿ ಲಭ್ಯವಾಗಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಂಬಂಧಪಟ್ಟ ಇಲಾಖೆ ಮೇಲೆ ಒತ್ತಡ ಹೇರಲಿ.

-ಡಾ. ಜಿ.ಬೈರೇಗೌಡ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.