ಶನಿವಾರ, ಅಕ್ಟೋಬರ್ 24, 2020
24 °C

ವಾಚಕರ ವಾಣಿ: ವಿಧವಿಧ ಬಾಣಸಿಗರ ಸುದ್ದಿ ಹೂರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿನ ನಿತ್ಯ...ನಾವು ಆಹಾರ, ಗಾಳಿ, ಸುದ್ದಿಯನ್ನು ಸೇವಿಸುವುದು ಅನಿವಾರ್ಯವಾಗಿ ಬಿಟ್ಟಿದೆ. ಈಗಾಗಲೇ ಆಹಾರ, ಗಾಳಿ ಕಲುಷಿತಗೊಂಡು ಅದನ್ನು ಸೇವಿಸುತ್ತಾ ನಾವೇ ಒಗ್ಗಿಕೊಂಡುಬಿಟ್ಟಿದ್ದೇವೆ‌.

ಇನ್ನು ಸುದ್ದಿಯ ಸುದ್ದಿಗೆ ಬಂದರೆ, ಈ ಮುಂಚೆ ಒಬ್ಬನೇ ಬಾಣಸಿಗನಿದ್ದು, ಅವನು ಮಾಡಿ ಬಡಿಸುತ್ತಿದ್ದದ್ದು ರುಚಿಯಾಗಿಯೂ, ಕರ್ಣಹಿತವಾಗಿಯೂ ಇರುತ್ತಿತ್ತು‌‌. ಆದರೆ, ಈಗ ಅಸಂಖ್ಯಾತ ಬಾಣಸಿಗರು ಒಂದೇ ಸುದ್ದಿಯನ್ನು ವಿಧ ವಿಧವಾಗಿ ರುಬ್ಬಿ ರುಬ್ಬಿ ತಮಗೆ ಇಷ್ಟ ಬಂದಂತೆ ಬಡಿಸುತ್ತಾ ಇರುವುದನ್ನು ನೋಡಿದರೆ, ಆ ಭಗವಂತ ನಮ್ಮ ಕಣ್ಣಿಗೆ ರೆಪ್ಪೆ ಕೊಟ್ಟಂತೆ, ಕಿವಿಗೂ ಯಾಕೆ ಕೊಡಲಿಲ್ಲಪ್ಪ ಅಂತ ಬೇಜಾರಾಗ್ತಿದೆ....!–ವಿ.ವಿಜಯೇಂದ್ರ ರಾವ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು