ಸೋಮವಾರ, ಡಿಸೆಂಬರ್ 5, 2022
19 °C

ಪ್ರಜಾವಾಣಿ@75 |"ನೂರು ಸಲಾಂ" ಪ್ರಜಾವಾಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

"ನೂರು ಸಲಾಂ" ಪ್ರಜಾವಾಣಿಗೆ

"ಪ್ರಜಾವಾಣಿ"ಯಲ್ಲಿ ಕಂಡುಬರುವ ಒಂದು ವಿಶೇಷತೆ ಎಂದರೆ, "ಸಂಪಾದಕೀಯ" ನ್ಯಾಯಬದ್ಧವಾಗಿ, ಜವಾಬ್ದಾರಿಯುತವಾಗಿ, ಯಾವ ಪ್ರಭಾವಗಳಿಗೂ ಮಣಿಯದ, ವಸ್ತುನಿಷ್ಠ, ವೈಶಿಷ್ಟ್ಯಗಳಿಂದ ಕೂಡಿದ ತೀರ್ಪಿನಂತಿರುತ್ತದೆ. "ಸಂಗತ" ಲೇಖನಗಳೂ ಕೂಡ, ವಿಚಾರವಂತ ತಜ್ಞರಿಂದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ವೈಚಾರಿಕತೆಯಿಂದ ಕೂಡಿ, ಓದುಗರಿಗೆ ಆಹ್ಲಾದ ತರುತ್ತದೆ. "ವಿಶ್ಳೇಷಣೆ" ವಿಭಾಗವಂತೂ ಅತ್ಯಂತ ಅವಶ್ಯಕ ಪುರಾವೆಗಳ ನಿಘಂಟಿನಂತಿರುತ್ತದೆ. ಜೀವನದಲ್ಲಿ ಅವಶ್ಯಕವಾದ ನ್ಯಾಯ, ನೀತಿ, ಧರ್ಮಗಳಿಂದ ಕೂಡಿದ, ಸಾಮಾಜಿಕ ವ್ಯವಸ್ಥೆಯಲ್ಲಿರಬೇಕಾದ ನಡೆ ನುಡಿಗಳ ಬಗ್ಗೆ ಕೊಡುವ ಪುಟ್ಟ ಪುರಾತನ ಧಾರ್ಮಿಕ ನೀತಿಗಳು ಮನಸ್ಸಿನ ಮೇಲೆ ಪರಿಣಾಮ ಮಾಡುತ್ತವೆ. ಈ ಎಲ್ಲ ಲೇಖನಗಳು ಪ್ರತಿನಿತ್ಯ ಓದುಗರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಇವುಗಳನ್ನು ದಿನ ನಿತ್ಯವೂ ಕೊಡುವ "ಪ್ರಜಾವಾಣಿ"ಗೆ ನೂರು ಸಲಾಂ.-

"-ಎಂ. ಶ್ರೀಧರ ರಾವ್, ಮರಲಹಳ್ಳಿ, ಕೋಲಾರ ಜಿಲ್ಲೆ,

45, ಮರಲಹಳ್ಳಿ, ಕೋಲಾರ ಜಿಲ್ಲೆ,

ಕೋಲಾರ 56 31 14

---

ಪ್ರಜಾವಾಣಿ ಪತ್ರಿಕೆಯು ನನ್ನ ಬಾಲ್ಯದ ದಿನಗಳಿಂದಲೂ ಪರಿಚಯ . ಯಾಕೆಂದರೆ ನಮ್ಮ ಮನೆಗೆ ಸುಮಾರು ವರ್ಷಗಳಿಂದಲೂ ಪ್ರಜಾವಾಣಿ ಪತ್ರಿಕೆಯನ್ನು ತರಿಸುತ್ತಾ ಇದ್ದರು ಈಗಲೂ ಸಹ. ನಾನು ಪ್ರಜಾವಾಣಿ ಪತ್ರಿಕೆಯ ದಿನನಿತ್ಯ ಓದುಗ .ಅದರಲ್ಲಿ ಸಂಪಾದಕೀಯ ಪುಟದಲ್ಲಿ ನನಗೆ ಬಹಳ ಇಷ್ಟವಾಗುವ ಲೇಖಕರೆಂದರೆ  ನಾಗೇಶ್ ಹೆಗಡೆ ಅವರ ಅಂಕಣದ ಶೀರ್ಷಿಕೆಯ  "ವಿಜ್ಞಾನ ವಿಶೇಷ" ಲೇಖನಗಳಲ್ಲಿ ವೈಜ್ಞಾನಿಕ ಬರಹಗಳೊಂದಿಗೆ ವಾಸ್ತವದ ವ್ಯವಸ್ಥೆಯ ಸಮಸ್ಯೆಯನ್ನು  ಚಿತ್ರಿಸುತ್ತಾರೆ ಹಾಗೂ ಭಾನುವಾರದ ವಿಶೇಷ ಕಾಲಂನಲ್ಲಿ ಪ್ರಕಟವಾಗುವ "ಒಳನೋಟ"  ಎಂಬ ವಿಶೇಷ  ವರದಿಯಲ್ಲಿ  ಸಮಾಜದ ವಿವಿಧ ಕ್ಷೇತ್ರಗಳ ಸಮಸ್ಯೆಗಳನ್ನು ಆಳವಾಗಿ ಪತ್ರಿಕೆಯಲ್ಲಿ ಸೆರೆ ಹಿಡಿಯುವ ಪರಿಕಲ್ಪನೆ ನಿಜಕ್ಕೂ ಮೆಚ್ಚುವಂತಹದ್ದು.

ಪ್ರಜಾವಾಣಿ  ಪತ್ರಿಕೆ  75ನೇ ವರ್ಷದ  ಅಮೃತ ಮಹೋತ್ಸವನ್ನು  ಸಂಭ್ರಮಿಸುತ್ತಾ ಇರುವುದು ಓದುಗರೆಲ್ಲರಿಗೂ  ಸಂಭ್ರಮಿಸುವ ಹಬ್ಬವಾಗಿದೆ .

ಶಶಾಂಕ್ ಎನ್, ಉದ್ದಾದೇವರ ಮಠ, ಕೋಣಂದೂರು

---

ಕರ್ನಾಟಕ ಸರ್ಕಾರ ' ಸಾರ್ವಜನಿಕ ಶಿಕ್ಷಣ ಇಲಾಖೆ'ಯು ಪ್ರತಿ ವರ್ಷ "ಶಿಕ್ಷಕರ ಅರ್ಹತಾ ಪರೀಕ್ಷೆ " ನಡೆಸುತ್ತಲೇ ಬರುತ್ತಿದೆ. ಶ್ಲಾಘನೀಯ. ಈ ಅರ್ಹತಾ ಪರೀಕ್ಷೆಯಲ್ಲಿ

ಪ್ರತಿಯೊಬ್ಬ ಅಭ್ಯರ್ಥಿಯು ಪೇಪರ್ -1 ಮತ್ತು ಪೇಪರ್ -2 ಎಂದು ಎರೆಡು ಪರೀಕ್ಷೆಗಳನ್ನು ಬರೆಯುವ ಅವಕಾಶ ಇರುತ್ತದೆ. ಇಲ್ಲಿ 6ಮಾತೃ ಭಾಷೆಯಲ್ಲಿ ಉತ್ತರಿಸಲು ಅವಕಾಶವಿದೆ. ಇದನ್ನು ನಾವು ಅಪ್ಲಿಕೇಶನ್ ಹಾಕುವಾಗಲೆ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿರುತ್ತವೆ. ಎಷ್ಟು ಅಭ್ಯರ್ಥಿಗಳು ಯಾವ ಭಾಷ ಮಾದ್ಯಮದಲ್ಲಿ ಉತ್ತರಿಸುತ್ತಾರೆ ಎಂಬ ಮಾಹಿತಿ ಶಿಕ್ಷಣ ಇಲಾಖೆ ಹತ್ತಿರ ಇರುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಯು ತಾನು ಆಯ್ಕೆ ಮಾಡಿಕೊಂಡ ಭಾಷೆಯಲ್ಲಿಯೇ ಓದಿ ಬರೆಯುದರಿಂದ ಅವರಿಗೇ ಉಳಿದ 5 ಭಾಷೆಗಳ ಪ್ರಶ್ನೆ ಪತ್ರಿಕೆಗಳು ಅವಶ್ಯಕತೆ ಬೀಳುವುದಿಲ್ಲ. ಇಲ್ಲಿ ಮುಖ್ಯ ವಿಷಯ ಏನೆಂದರೆ ಸಾರ್ವಜನಿಕರ ಶಿಕ್ಷಣ ಇಲಾಖೆ ಪರೀಕ್ಷೆ ಬರೆಯುವ ಎಲ್ಲಾ ಅಭ್ಯರ್ಥಿಗಳಿಗೂ ಎಲ್ಲಾ ಮಾದ್ಯಮದ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ಒಂದೇ ಗುಚ್ಚದಲ್ಲಿ ಪಿನ್ ಹೊಡೆದು ಕೊಡುತ್ತಿದ್ದಾರೆ. ಪೇಪರ್ 1-176 ಪುಟಗಳು, ಪೇಪರ್ 2-180 ಪುಟಗಳು. ಇಲ್ಲಿ ಒಂದು ಭಾಷ ಮಾದ್ಯಮದಲ್ಲಿ ಉತ್ತರಿಸುವ ಅಭ್ಯರ್ಥಿಗೆ 18 ರಿಂದ 20 ಪುಟಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಬಹುದು. ಇಲ್ಲಿ ಒಬ್ಬ ಅಭ್ಯರ್ಥಿಗೆ ಹೆಚ್ಚುವರಿಯಾಗಿ (ಉಳಿದ 5 ಹಿಂದಿ ಇಂಗ್ಲಿಷ್ ಉರ್ದು ಮರಾಠಿ ತೆಲುಗು ತಮಿಳು ಭಾಷೆಯ ಪ್ರಶ್ನೆ ಪತ್ರಿಕೆ) 60 ರಿಂದ 70 ಪುಟಗಳ ಪ್ರಶ್ನೆ ಪತ್ರಿಕೆ ಯನ್ನು ಕೊಡುತ್ತಿದ್ದಾರೆ. ಪ್ರಾರಂಭದಿಂದಲೂ ಈ ಕ್ರಮವನ್ನು ಅನುಸರಿಸುತ್ತಾ ಬಂದಿದೆ. ಇದು ಅನಾವಶ್ಯಕವಾಗಿ ಪೇಪರ ಮತ್ತು ಮುದ್ರಣ ವೆಚ್ಚ ಮಾಡಿದಂತೆ. ಮತ್ತು ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಗೊಂದಲವನ್ನು ಉಂಟುಮಾಡುವಂತ ವಿಷಯವಾಗಿದೆ. ಇಲ್ಲಿ ನಾವು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಖರ್ಚು ವೆಚ್ಚವನ್ನು ಅಷ್ಟೇ ನೋಡದೆ ಪರಿಸರ ರಕ್ಷಣೆ ಕಾಳಜಿ ದೃಷ್ಟಿಯಿಂದಲೂ ಇದನ್ನು ಯೋಚಿಸಬೇಕಾದ ಸಂಗತಿಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸುವ ಸಂದರ್ಭದಲ್ಲಿ ಎಷ್ಟು ಅಭ್ಯರ್ಥಿಗಳು ಯಾವ ಯಾವ ಭಾಷಾ ಮಾಧ್ಯಮದಲ್ಲಿ ಉತ್ತರಿಸಲು ಆಯ್ಕೆಯನ್ನು ಬಯಸಿದ್ದಾರೆ ಎಂಬುದನ್ನ ಅಂಕಿ ಅಂಶಗಳಲ್ಲಿ ಕ್ರೋಡಿಕರಿಸಿ ಯಾವ ಭಾಷ ಮಾಧ್ಯಮದ ಪ್ರಶ್ನೆ ಪತ್ರಿಕೆಗಳನ್ನು ಎಷ್ಟು ಮುದ್ರಿಸಬೇಕೆಂಬುದು ಲೆಕ್ಕಿಸಿ ಮುದ್ರಿಸಿದರೆ ಇಲಾಖೆಗೂ, ಸರಕಾರಕ್ಕೂ, ಅಭ್ಯರ್ಥಿಗಳಿಗೂ, ಟ್ಯಾಕ್ಸ್ ಕಟ್ಟುವ ಸಾರ್ವಜನಿಕರಿಗೂ, ಮುಖ್ಯವಾಗಿ ಪರಿಸರಕ್ಕೂ ಎಲ್ಲರಿಗೂ ಒಳಿತಾದಿತು ಎಂಬುದು ಈ ಅನಿಸಿಕೆಯ ಹಿಂದಿನ ದೂರದೃಷ್ಟಿ. ಇಲ್ಲಿ ಇಲಾಖೆ ತನ್ನ ಸರಿಯಾದ ದೃಷ್ಟಿಕೋನದಿಂದಲೆ ಹೀಗೆ ಮುದ್ರಿಸುತ್ತಿದ್ದರೆ? ನನ್ನ ತಿಳುವಳಿಕೆ ತಪ್ಪಿದ್ದರೆ ಮುಕ್ತವಾಗಿ ನನ್ನ ಆಲೋಚನೆಯನ್ನು ತಿದ್ದಿಕೊಳ್ಳುತ್ತೇನೆ.

 

- ಡಾ. ಬಸಯ್ಯ ಸ್ವಾಮಿ ಕಮಲದಿನ್ನಿ, ಕನ್ನಡ ಉಪನ್ಯಾಸಕ, ಸರ್ವಜ್ಞ ಪದವಿ ಪೂರ್ವ ಮಹಾ ವಿದ್ಯಾಲಯ ಕಲಬುರ್ಗಿ

9482948320

----

ಮೌಲ್ಯಾಧಾರಿತ ಪತ್ರಿಕೆ "ಪ್ರಜಾವಾಣಿ"

ಈ ದಿನಗಳಲ್ಲಿ, ಜಾತಿ, ಧರ್ಮ, ಕೋಮು ಧ್ವೇಷ, ಎಲ್ಲ ಕಡೆ ಎಲ್ಲ ಪರಿಸರವೂ ಕಲ್ಮಶವಾಗಿ, ಎಲ್ಲೆಲ್ಲೂ ಮಾನಸಿಕ ಕ್ಷೋಭೆ ತರುವ ವಾತಾವರಣದಲ್ಲಿ, 'ಪ್ರಜಾವಾಣಿ" ದಿನಪತ್ರಿಕೆ, ಜಾತ್ಯಾತೀತ, ವರ್ಗಾತೀತ, ಧರ್ಮಾತೀತವಾಗಿ, ಪತ್ರಿಕಾಧರ್ಮಗಳ ಮಾನದಂಡದ ಮುಖವಾಣಿಯಂತೆ, ವಸ್ತುನಿಷ್ಠವಾಗಿ, ಪಾರದರ್ಶಕವಾಗಿ, ನಿಸ್ಪಕ್ಷಪಾತವಾಗಿ, ಮೌಲ್ಯಾಧಾರಿತ ಪತ್ರಿಕೆಯಾಗಿ, ರಾಜ್ಯದ, ದೇಶದ, ವಿಶ್ವದ ಎಲ್ಲ ಪ್ರಮುಖ ವರದಿಗಳನ್ನು ಓದುಗರಿಗೆ ಶೀಘ್ರವಾಗಿ ಕೊಡುವ ಒಂದು ವಾಹಿನಿಯಾಗಿ, ಏಳೂವರೆ ದಶಕಗಳಿಂದಲೂ ಮುಂದಿರುವುದು ಅತ್ಯಂತ ಸಂತೋಷದಾಯಕ ಸುದ್ದಿ. ಪ್ರಜಾವಾಣಿಯಲ್ಲಿಲ್ಲದ್ದು ಎಲ್ಲೂ ಸಿಗುವುದಿಲ್ಲ. ಪ್ರತಿಯೊಂದು ವರದಿಯೂ ಓದುಗರ ಗಮನ ಸಳೆಯುತ್ತದೆ. ಅಷ್ಟೇ ಅಲ್ಲ, ಪತ್ರಿಕೆಯಲ್ಲಿ ಇರುವ ಪ್ರಬುದ್ಧ ಲೇಖನಗಳು, ಎಲ್ಲ ತರಹದ ವಾಚಕರ ಬೌದ್ಧಿಕ ಸಾಮಥ್ರ್ಯವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಮುಂದೆಯೂ, ಬರಲಿರುವ ಪೀಳಿಗೆಗಳಿಗೂ ದಾರಿದೀಪವಾಗಲಿ ಎಂದು ಆಶಿಸುತ್ತೇನೆ. - ಪಿ ಸಿ ಕೇಶವ, ಬೆಂಗಳೂರು

198/1, 3ನೇ ಮುಖ್ಯ ರಸ್ತೆ,
2ನೇ ಅಡ್ಡ ರಸ್ತೆ,
ಮಹಾಲಕ್ಷ್ಮಿಪುರಂ,
ಬೆಂಗಳೂರು -5600 82

---

"ಮಹಿಳಾ ವಾಣಿ" ಯಾಗಿಯೂ ಇದೆ, ನಮ್ಮ "ಪ್ರಜಾವಾಣಿ"

ಎಲ್ಲ ಕ್ಷೇತ್ರಗಳೂ "ಪುರುಷ ಪ್ರಧಾನ" ವಾಗಿರುವಾಗ, "ಪ್ರಜಾವಾಣಿ" "ಮಹಿಳಾ ವಾಣಿ"ಯಾಗಿ, ಮಹಿಳೆಯರ, ಮಕ್ಕಳ ಅವಶ್ಯತೆಗಳ ದನಿಯಾಗಿ, ಮಹಿಳೆಯರ ಅಂಗರಕ್ಷಕರಂತೆ ಅನೇಕ ನೈತಿಕ, ವೈಯುಕ್ತಿಕ, ಶೈಕ್ಷಣಿಕ, ವೈದ್ಯಕೀಯ ವರದಿಗಳಿಗೂ ಪ್ರತ್ಯೇಕ ಪುಟವನ್ನು ಮೀಸಲಿಟ್ಟಿರುವುದು ಅತ್ಯಂತ ಸಮಾಧಾನಕರ. ಪತ್ರಿಕೆಯಲ್ಲಿ ಪ್ರಕಟಿಸುವ ಅನೇಕ "ಪರೀಕ್ಷೆ" ಗಳ ಬಗ್ಗೆ ಕೊಡುವ ಸಮಂಜಸ, ಅವಶ್ಯಕ "ಕಿವಿ ಮಾತು"ಗಳು ಕುಟುಂಬಗಳಿಗೆ ಪೋಷಕವಾಗಿರುತ್ತವೆ. "ಅಭಿಮತ"ದಲ್ಲಿ ಪ್ರಕಟವಾಗುವ ಮಹಿಳಾ ಲೇಖಕರ ವೈಚಾರಿಕ ಲೇಖನಗಳು ಖಂಡಿತ ಮನಸ್ಸುಗಳಿಗೆ ಮುದ ಕೊಡುತ್ತವೆ. ನಾನಾ ಸಮಸ್ಯೆಗಳಲ್ಲಿ ಮುಳುಗಿರುವ ಮಹಿಳೆಯರಿಗೆ, "ಪ್ರಜಾವಾಣಿ" ಪತ್ರಿಕೆಯಾಗಿ ಒಂದೇ ಅಲ್ಲ, "ಕುಟುಂಬದ ಪತ್ರಿಕೆ" ಯಂತಿರುತ್ತದೆ. ಜೊತೆಗೆ ಒಂದು ವಿನಂತಿ. "ಅಭಿಮತ"ದಲ್ಲಿನ ಲೇಖಕರ ಬಗ್ಗೆಯೂ ವಿವರ ತಿಳಿಸಿದರೆ ಉತ್ತಮ. - ವಾಣಿ ಅಯ್ಯಂಗಾರ್. ಬೆಂಗಳೂರು.

158, 5ನೇ ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ, 2ನೇ ಹಂತ, ನಾಗರಭಾವಿ, ಬೆಂಗಳೂರು -560091

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು