ಬುಧವಾರ, ಫೆಬ್ರವರಿ 19, 2020
25 °C

ಪ್ರತಿಭಟನೆ ಹತ್ತಿಕ್ಕುವ ಯತ್ನ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಭವನದ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಸಂಘಟನೆಗಳು ಅನುಮತಿ ಪಡೆಯಲು ಇನ್ನು ಮುಂದೆ ಪೊಲೀಸ್ ಇಲಾಖೆಗೆ ₹10 ಲಕ್ಷದವರೆಗೆ ಬಾಂಡ್ ನೀಡಬೇಕು ಎಂದು ವರದಿಯಾಗಿದೆ (ಪ್ರ.ವಾ., ಜ. 31). ಇಲಾಖೆಯ ಈ ಕ್ರಮ ಪ್ರತಿಭಟನೆಯನ್ನೇ ಹತ್ತಿಕ್ಕುವಂತಿದೆ. ₹10 ಲಕ್ಷ ಸಣ್ಣ ಮೊತ್ತವೇನಲ್ಲ. ಪ್ರತಿಭಟನೆಗಳಿಂದ ಕೆಲವೊಮ್ಮೆ ಸಾರ್ವಜನಿಕ ಆಸ್ತಿಗೆ ಹಾನಿ ಆಗುವುದು ಸತ್ಯವೇ ಆದರೂ ಬಹುತೇಕ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಪೊಲೀಸ್‌ ಇಲಾಖೆ ಬಯಸಿದಲ್ಲಿ ಎರಡು ಅಥವಾ ಮೂರು ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಪ್ರತಿಭಟನಕಾರರ ಮೇಲೆ ನಿಗಾ ವಹಿಸಲಿ. ಹೆಚ್ಚಿನ ತೊಂದರೆ ಆದಲ್ಲಿ ಆ ಸಂಘಟನೆಗಳಿಂದ ಹಣ ವಸೂಲಿ ಮಾಡಲಿ ಮತ್ತು ಅವುಗಳಿಗೆ ಮತ್ತೊಮ್ಮೆ ಪ್ರತಿಭಟನೆಗೆ ಅನುಮತಿ ನೀಡದಿರಲಿ. ಅದುಬಿಟ್ಟು, ಬಾಂಡ್‌ನ ಮೂಲಕ ಪ್ರತಿಭಟನೆಗಳನ್ನೇ ಹತ್ತಿಕ್ಕುವ ಇಂತಹ ನಿರ್ಧಾರದಿಂದ ಇಲಾಖೆ ಹಿಂದೆ ಸರಿಯಲಿ. 

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)