ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅತಿರೇಕದ ಟ್ರೋಲ್‌

Last Updated 19 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೋಲ್’ ಪರಿಪಾಟ ಇತ್ತೀಚಿನ ದಿನಗಳಲ್ಲಿ ಅತಿರೇಕಕ್ಕೆ ಹೋಗಿದೆ. ಕೆಲ ತಿಂಗಳ ಹಿಂದೆ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದ ಕನ್ನಡದ ಕಿರುತೆರೆ ನಟಿಯೊಬ್ಬರು ಆ ಕಾರ್ಯಕ್ರಮದ ತುಣುಕೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ಆಕೆಯನ್ನು ಪ್ರೋತ್ಸಾಹಿಸುವ ಬದಲು, ಇದೇ ವಿಷಯವನ್ನು ಇಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಟ್ರೋಲ್‌ ಮಾಡಿದರು. ಇದರಿಂದ ಆ ನಟಿಗೆ ಸಹಜವಾಗಿಯೇ ನೋವಾಗಿತ್ತು.

ಈಗ ಬೆಂಗಳೂರಿನ ಡಿ.ಜೆ. ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಯೊಂದು ಮಹಿಳೆಯೊಬ್ಬರನ್ನು ಮಾತನಾಡಿಸಿದಾಗ, ಅವರು ಕನ್ನಡದ ಪದಗಳನ್ನು ತಪ್ಪಾಗಿ ಉಚ್ಚರಿಸಿದರು. ಅದನ್ನೇ ಈಗ ದೊಡ್ಡ ವಿಷಯವೆಂಬಂತೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಟ್ರೋಲ್ ಮಾಡಿದ್ದೇ ಮಾಡಿದ್ದು.

ನಾವು ದಿನನಿತ್ಯ ನಮ್ಮ ಮನೆಭಾಷೆಯಲ್ಲಿ ಮಾತನಾಡುವಾಗ ಹುಡುಕಿದರೆ ಎಷ್ಟೋ ತಪ್ಪುಗಳು ಸಿಗುತ್ತವೆ. ಅಂತಹುದರಲ್ಲಿ ಆ ಮಹಿಳೆ ಮಾತನಾಡುವಾಗ ಆದ ತಪ್ಪು ಅಷ್ಟೇನೂ ಗಂಭೀರವಾದದ್ದಲ್ಲ. ಹೀಗಾಗಿ ಯಾವುದೇ ವಿಷಯವನ್ನು ಟ್ರೋಲ್ ಮಾಡುವ ಮುನ್ನ ಅದರ ಸಾಧಕ–ಬಾಧಕವನ್ನು ಸೂಕ್ಷ್ಮವಾಗಿ ಆಲೋಚಿಸಬೇಕು.
-ಮಂಜುನಾಥ ಬಿ.ವಿ.,ಮುದ್ರಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT