ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಪರೂಪದ ಚಿತ್ರ, ಅಸಮಂಜಸ ದರ

Last Updated 21 ಅಕ್ಟೋಬರ್ 2020, 17:42 IST
ಅಕ್ಷರ ಗಾತ್ರ

ಇತ್ತೀಚೆಗೆ ನಡೆದ ಮೈಸೂರು ವಿಶ್ವವಿದ್ಯಾಲಯದ 100ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಂದು ವಿವಿಧ ವಿಷಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಲಾಯಿತು ಹಾಗೂ ಪಿಎಚ್.ಡಿ ಸಂಶೋಧಕರಿಗೆ ಪದವಿ ಪ್ರದಾನ ಮಾಡಲಾಯಿತು. ಒಟ್ಟು 600ಕ್ಕೂ ಹೆಚ್ಚು ಮಂದಿ ಈ ಗೌರವಕ್ಕೆ ಪಾತ್ರರಾಗಿದ್ದರು. ಬೇಸರದ ಸಂಗತಿ ಎಂದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಫೋಟೊ ತೆಗೆಯಲು ನೇಮಕ ಮಾಡಿದ್ದ ಸ್ಟುಡಿಯೊದವರು ಪ್ರತೀ ಫೋಟೊಗೆ ₹ 100 ಹಾಗೂ ಸಾಫ್ಟ್‌ ಕಾಪಿಗೆ ₹ 400 ಅನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿದರು. ₹ 15ರಿಂದ ₹ 50 ಬೆಲೆಯ ಫೋಟೊಗೆ ವಿಧಿಯಿಲ್ಲದೆ ₹ 500 ಕೊಡುವಂತಾಯಿತು. ಮೊಬೈಲ್ ಮತ್ತು ಸ್ವಂತ ಕ್ಯಾಮೆರಾಗಳಿಂದ ಫೋಟೊ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿತ್ತು.

ಇಂತಹ ಸಮಾರಂಭಗಳಲ್ಲಿ ಗೌರವಕ್ಕೆ ಪಾತ್ರರಾದವರಿಗೆ ಫೋಟೊ ಎಷ್ಟು ಮುಖ್ಯ ಎಂಬುದು ತಿಳಿದಿರುವುದರಿಂದ, ಮೊದಲೇ ಇಂತಿಷ್ಟು ಹಣ ಪಡೆದು ವಿಶ್ವವಿದ್ಯಾಲಯವೇ ಎಲ್ಲರಿಗೂ ಸಮಂಜಸ ದರದಲ್ಲಿ ಫೋಟೊಗಳನ್ನು ವಿತರಿಸಬಹುದಿತ್ತು ಅಥವಾ ಸ್ವತಃ ಅದರ ವೆಚ್ಚ ಭರಿಸಬಹುದಿತ್ತು. ಇದರಿಂದ ಸ್ಟುಡಿಯೊದವರ ಹಗಲು ದರೋಡೆ ತಪ್ಪುತ್ತಿತ್ತು.

ಮಂಜುನಾಥ್ ಡಿ., ಕೊಪ್ಪ, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT