ಬುಧವಾರ, ಮೇ 18, 2022
23 °C

ಅಸ್ತಿತ್ವದ ಅಂಜಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡೊನೇಷ್ಯಾದಲ್ಲಿ ಅವಿಶ್ರಾಂತ ಮತ ಎಣಿಕೆಯಿಂದ 272 ಮಂದಿ ಚುನಾವಣಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ (ಪ್ರ.ವಾ., ಏ. 29).

ಕೆಲಸದ ಒತ್ತಡ ಹಾಗೂ ಮಾನಸಿಕ ವೇದನೆಯಿಂದ ಈ ಅಮೂಲ್ಯ ಜೀವಗಳು ಬಲಿಯಾದ ಸುದ್ದಿ ಓದಿದಾಗ, ಈ ಹಿಂದೆ 1960ರ ದಶಕದಲ್ಲಿ ನಾನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿ ಪಂಚಾಯಿತಿ ಚುನಾವಣೆಗಳ ಮತಪತ್ರಗಳನ್ನು ಎಣಿಸಿದ ಸಂದರ್ಭ ನೆನಪಾಯಿತು.

ಆಗ ಚುನಾವಣಾ ಏಜೆಂಟರ ತಕರಾರಿನಿಂದಾಗಿ, ಮತ್ತೆ ಮತ್ತೆ ಮತ ಪತ್ರಗಳನ್ನು ಎಣಿಸುತ್ತ, ಎರಡು ಹಗಲು, ಎರಡು ರಾತ್ರಿ ತಹಶೀಲ್ದಾರರ ಕಚೇರಿಯಲ್ಲಿಯೇ ಕಳೆದು ನೌಕರಿ ಉಳಿಸಿಕೊಳ್ಳಬೇಕಾದ ಪ್ರಸಂಗ ಒದಗಿತ್ತು. ಜೀವನೋಪಾಯದ ನೌಕರಿಗಾಗಿ ಇಂಡೊನೇಷ್ಯಾದ ಚುನಾವಣಾ ಸಿಬ್ಬಂದಿ ಜೀವವನ್ನೇ ಬಲಿ ಕೊಡಬೇಕಾದುದು ದುರ್ದೈವ.
-ಬಸವರಾಜ ಡಿ. ಕುಡಚಿ, ಬೆಳಗಾವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು