ಶನಿವಾರ, ಜನವರಿ 25, 2020
28 °C

ಮೂಲ ಉದ್ದೇಶ ಮರೆತರೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿಯಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪರಿಷತ್‌ ವತಿಯಿಂದ ಒಂದೂ ಪುಸ್ತಕ ಬಿಡುಗಡೆಯಾಗುವುದಿಲ್ಲ ಎಂದು ವರದಿಯಾಗಿದೆ. ಇದನ್ನು ತಿಳಿದು ವಿಷಾದವಾಯಿತು. ಸಾಹಿತ್ಯ ಪರಿಷತ್ತಿನ ಮೂಲ ಉದ್ದೇಶಗಳಲ್ಲಿ ಪುಸ್ತಕ ಪ್ರಕಟಣೆಯೂ ಒಂದು. ಗುಣಮಟ್ಟದ ಪುಸ್ತಕ ಪ್ರಕಟಣೆಯಿಂದ ಪರಿಷತ್ತಿಗೆ ಲಾಭವಾಗುವುದರಲ್ಲಿ ಸಂದೇಹವಿಲ್ಲ. ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಯೇ ಇಲ್ಲವೆಂದಾದರೆ, ಸಮ್ಮೇಳನ ನಡೆಸುವುದರಲ್ಲಿ ಅರ್ಥವಿಲ್ಲ ಎನಿಸುತ್ತದೆ.

-ಪ್ರಕಾಶ ಗಿರಿಮಲ್ಲನವರ, ಬೆಳಗಾವಿ

 

ಪ್ರತಿಕ್ರಿಯಿಸಿ (+)