ರಾಮನಗರ ಜಿಲ್ಲೆಯ ಹೆಸರು ಬದಲಿಸುವ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿದರೆ, ‘ಹೆಸರು ಬದಲಾವಣೆಯ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಆದರೆ, ರಾಜಕಾರಣಿಗಳು ದೇವಸ್ಥಾನಗಳನ್ನು ಸುತ್ತಲು ತಾವು ಆಗಾಗ ಭೇಟಿ ಕೊಡುವ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೆಸರುಗಳನ್ನಂತೂ ಜರೂರಾಗಿ ಬದಲಿಸಬೇಕಾದ ಅವಶ್ಯಕತೆ ಇದೆ!

ಕರ್ನಾಟಕದ ಎಲ್ಲ ಜಿಲ್ಲೆಗಳೂ ಕನ್ನಡ ಜಿಲ್ಲೆಗಳೇ. ಹಾಗಿರುವಾಗ ಈ ಎರಡು ಜಿಲ್ಲೆಗಳಿಗೆ ಮಾತ್ರ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂಬ ಅಸಂಗತ ಹೆಸರುಗಳನ್ನು ಮುಂದುವರಿಸುವ ಅವಶ್ಯಕತೆಯಾದರೂ ಏನಿದೆ? ಬ್ರಿಟಿಷರ ಕಾಲದಲ್ಲಿ ನಮ್ಮ ಸಂಪೂರ್ಣ ಕರಾವಳಿ ಒಂದೇ ಜಿಲ್ಲೆಯಾಗಿ ಮದ್ರಾಸ್ ಪ್ರಾಂತ್ಯದಲ್ಲಿ ಇದ್ದದ್ದರಿಂದ, ಅವರು ಇದಕ್ಕೆ ‘ಕನ್ನಡ (ಕೆನರಾ) ಜಿಲ್ಲೆ’ ಎಂದು ಹೆಸರಿಟ್ಟರು. ನಂತರ ಅದನ್ನು ಎರಡು ಜಿಲ್ಲೆಗಳಾಗಿ ವಿಭಜಿಸಿ ಸೌತ್ ಕೆನರಾ ಮತ್ತು ನಾರ್ತ್ ಕೆನರಾ ಎಂದು ಬದಲಾಯಿಸಿದರು. ಸ್ವಾತಂತ್ರ್ಯಾನಂತರ ಕರ್ನಾಟಕವು ಪ್ರತ್ಯೇಕ ರಾಜ್ಯವಾದ ಮೇಲೂ ಬ್ರಿಟಿಷರ ಆ ಪಳೆಯುಳಿಕೆಯನ್ನೇ ನಾವು ಕನ್ನಡೀಕರಿಸಿ ಮುಂದುವರಿಸಿದೆವು. ಈಗ ಇವುಗಳಿಗೆ ಲಕ್ಷಣವಾಗಿ ಮಂಗಳೂರು ಜಿಲ್ಲೆ ಮತ್ತು ಕಾರವಾರ ಜಿಲ್ಲೆ ಎಂಬ ಹೆಸರುಗಳನ್ನು ಯಾಕೆ ಇಡಬಾರದು?

-ಅನಿಲ್ ಪೂಜಾರಿ, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.